Thursday, January 30, 2014

Daily Crimes Report Dated:29-30/01/2014



ಕಳುವು ಪ್ರಕರಣ
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.24/2014ಕಲಂ:457 380 ಐಪಿಸಿ – ದಿನಾಂಕ 28/01/2014 ರಂದು ರಾತ್ರಿ ವೇಳೆಯಲ್ಲಿ ಉಪ್ಪಳ್ಳಿಯಲ್ಲಿರುವ ಪಿರ್ಯಾದುದಾರರಾದ ಶಾಹಿದ್‌ ಇವರ ಅಂಗಡಿಗೆ ಯಾರೋ ಕಳ್ಳರು ಅಂಗಡಿ ಬೀಗವನ್ನು ಒಡೆದು ಅಂಗಡಿಯಲ್ಲಿದ್ದ ಎರಡು ಫಾರ್ಮಿ ಮೋಬೈಲ್ ಪೋನ್ ಗಳು ಇದರ ಬೆಲೆ ಸುಮಾರು 3,000/ ರೂ ಗಳಾಗಿರುತ್ತೆ ಕ್ಯಾಶ್ ಟೇಬಲ್ ನಲ್ಲಿದ್ದ ಸುಮಾರು 2,500/ ರೂ ಗಳಷ್ಟು ಚಿಲ್ಲರೆ ಹಣ ವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಹಾಗೂ ನಮ್ಮ ಪಕ್ಕದ ಮನೆಯಲ್ಲಿ ವಾಸವಾಗಿರುವ ಮಂಜುಳ ಕೋಂ ಲೇ// ಕೃಷ್ಣಮೂರ್ತಿ ರವರ ಮನೆಯಲ್ಲೂ ಸಹ 2000/- ರೂ ನಗದು ಹಣ ಹಾಗೂ 05 ಗ್ರಾಂ ತೂಕದ ಒಂದುಜೊತೆ ಓಲೆ ಇವುಗಳ ಬೆಲೆ ಸುಮಾರು 9500/- ರೂ ಗಳಾಗಿರುತ್ತೆ  ವಸ್ತು ಗಳ ಬೆಲೆ ಒಟ್ಟು 17,000/-ಗಳಾಗಿರುತ್ತೆ.
ಜೂಜಾಟ ಪ್ರಕರಣ 
ಆಲ್ದೂರು ಪೊಲೀಸ್‌ ಠಾಣೆ ಮೊ.ಸಂ.17/2014ಕಲಂ:87 ಕೆ.ಪಿ ಆಕ್ಟ್ – ದಿನಾಂಕ 29/01/2014 ರಂದು 1730 ಗಂಟೆಯಲ್ಲಿ ಕೆಳಗೂರಿನ ಚಂದ್ರೇಗೌಡರಿಗೆ ಸೇರಿದ ಜಾಗದಲ್ಲಿ 10 ಜನರು  ಇಸ್ಪಿಟ್‌ ಎಲೆಗಳಿಂದ ಅಂದರ್‌ ಬಾಹರ್‌ ಎಂದು ಹೇಳಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪಿಟ್‌ ಜೂಜಾಟ ಅಡುತಿದ್ದವರನ್ನು ಪಿಎಸ್‌ಐ ಮತ್ತು ಸಿಬ್ಬಂದಿಗಳು ಪಂಚರೊಂದಿಗೆ ಸುತ್ತುವರಿದು ಹಿಡಿದು 52 ಇಸ್ಪಿಟ್‌ ಎಲೆಗಳು ಮತ್ತು 4900-00 ರೂ ಹಣವನ್ನು ಮತ್ತು  NOKIA ಎಂದು ಬರೆದಿರುವ 6 ಮೊಬೈಲ್‌ಗಳು, RELIANCE ಎಂದು ಬರೆದಿರುವ 1 ಮೊಬೈಲ್‌ನ್ನು ಮತ್ತು ಆರೋಪಿಗಳಾದ ಚಂದ್ರೇಗೌಡ ಹಾಗೂ ಇತರೆ 9 ಜನರನ್ನು ವಶಕ್ಕೆ ಪಡೆದು ಪ್ರಕರಣ  ದಾಖಲಿಸಿರುತ್ತೆ .
ಹುಡುಗ ಕಾಣೆ
ಕೊಪ್ಪ ಪೊಲೀಸ್‌ ಠಾಣೆ ಮೊ.ಸಂ.11/2014ಕಲಂ:ಹುಡುಗ ಕಾಣೆ – ದಿನಾಂಕ 02/01/2014 ರಂದು ಪಿರ್ಯಾದಿ ಸುಶಾಪಿಂಟೋ ಇವರು ದೂರು ನೀಡಿದ್ದು ತನ್ನ ಮಗ 17 ವರ್ಷದ ಲೋರೆನ್ಸ್ ಪಿಂಟೋ ಈತನು 10 ನೇ ತರಗತಿ ಓದುತ್ತಿದ್ದು ದಿನಾಂಕ:02-01-2014 ರಂದು ತಾನು ಅಂಗನವಾಡಿ ಕೆಲಸಕ್ಕೆ ಬೆಳಿಗ್ಗೆ 09-30 ಗಂಟೆಗೆ ಹೋಗಿ ಸಂಜೆ 4-00 ಗಂಟೆಗೆ ವಾಪಾಸ್ಸು ಮನೆಗೆ ಬಂದಿದ್ದು ತನ್ನ ಮನೆಯಲ್ಲಿದ್ದ ಮಗ ಲೋರೆನ್ಸ್ ಪಿಂಟೋ ಮನೆಯಿಂದ ಕಾಣೆಯಾಗಿರುತ್ತಾನೆಂದು ಈ ದಿನದವರೆಗೆ ವಾಪಾಸ್ಸು ಮನೆಗೆ ಬಂದಿಲ್ಲವೆಂದು ಇಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ.

Wednesday, January 29, 2014

Daily Crimes Report Dated:28-29/01/2014



ಮೋಟಾರ್ ಸೈಕಲ್ ಕಳ್ಳತನ
ನಗರ  ಪೊಲೀಸ್‌ ಠಾಣೆ ಮೊ.ಸಂ.8/2014ಕಲಂ:379 ಐಪಿಸಿ – ದಿನಾಂಕ 15/01/2014 ರಂದು 1515 ಗಂಟೆಯಲ್ಲಿ ಪಿರ್ಯಾದುದಾರರು ಪರಮೇಶ್ವರಪ್ಪ ಇವರು ಆರ್‌ಜಿ ರಸ್ತೆಯಲ್ಲಿ  ಹಿರೋಹೊಂಡ ಸ್ಲ್ಪೆಂಡರ್ ಕೆಎ 18 ಜೆ 1172 ದ್ವಿಚಕ್ರ ವಾಹನದಲ್ಲಿ ಹೋಗಿದ್ದು  ವಾಹನವನ್ನು ಕೆ .ಎಂ.ರಸ್ತೆಯ ಭರಣಿ ವೈನ್ಸ್  ಎದುರು ಭಾಗದಲ್ಲಿ  ನಿಲ್ಲಿಸಿ ಸಂತೆಗೆ ಹೋಗಿ ತರಕಾರಿ  ಖರೀದಿ ಮುಗಿಸಿಕೊಂಡು ಸಂಜೆ ಬಂದಾಗ ಪಿರ್ಯಾದಿಯ ವಾಹನವು ನಿಲ್ಲಿಸಿದ್ದ ಜಾಗದಲ್ಲಿ ಸ್ಥಳದಿಂದ ಕಾಣೆಯಾಗಿತ್ತು.
ಮನೆ ಕಳ್ಳತನ ಪ್ರಕರಣ 
ನಗರ  ಪೊಲೀಸ್‌ ಠಾಣೆ ಮೊ.ಸಂ.9/2014ಕಲಂ:454 457 380  ಐಪಿಸಿ – ಪಿರ್ಯಾದುದಾರರು ಶಾಂತರಾಮ ಪಾಯಸ್‌ ಕಾಂಪೌಂಡ್‌ ಕೆಳಭಾಗ ಇವರು ದಿನಾಂಕ 27/01/2014 ರಂದು ಸ್ವಂತ ಊರಾದ ಕುಂದಾಪುರಕ್ಕೆ ತೆರಳಿದ್ದು ದಿನಾಂಕ 28/01/2014 ರಂದು ಸಂಜೆ ಬಂದು ನೋಡಿದಾಗ ನಮ್ಮ ಮನೆಗೆ ಬಾಗಿಲ ಒಳ ಬಾಗದ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಒಳಕ್ಕೆ ನುಗ್ಗಿ ಒಂದು ಬೆಳ್ಳಿಯ ಲೋಟವನ್ನು ಒಂದು ಗ್ರಾಂ.ಚಿನ್ನದಿಂದ ಮಾಡಿದ ಎರಡು ಜೊತೆ ಬಳೆ ಹಾಗೂ ಒಂದು ಗ್ರಾಂ ಚಿನ್ನದಿಂದ ಮಾಡಿದ ಒಂದು ಜೊತೆ ಕಿವಿಯ ಜುಮುಕಿಯನ್ನು ಕಳ್ಳತನ ಮಾಡಿರುತ್ತಾರೆ ಹಾಗೆಯೇ.ನಮ್ಮ ದೇವರ ಕೋಣೆಯಲ್ಲಿ ಇಟ್ಟಿದ್ದ ಸುಮಾರು ಮುಕ್ಕಾಲು ಅಡಿ ಎತ್ತರದ ಹುಂಡಿಯಲ್ಲಿ ಹಾಕಿದ್ದ ಸುಮಾರು 40.000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಒಟ್ಟು ಕಳುವಾದ ವಸ್ತುಗಳ ಒಟ್ಟು ಮೌಲ್ಯ 48.000/- ರೂ ಆಗಿರುತ್ತೆ.
ಮನೆ ಕಳ್ಳತನ ಪ್ರಕರಣ 
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.21/2014ಕಲಂ:454 457 380  ಐಪಿಸಿ – ಪಿರ್ಯಾದಿ ಪೆಟ್ರೋಲ್ ಬಂಕಿನ ಒಳಗೆ  ಊಟ ಮಾಡುತ್ತಿದ್ದಾಗ ಕೆಎ.46 ಇ.4165 ಡಿಸ್ಕವರ್ ಮೋಟಾರ್ ಸೈಕಲ್ಲಿನಲ್ಲಿ ಮೂರು ಜನ ಅಪರಿಚಿತರು ಬಂದು ಪೆಟ್ರೋಲ್ ಹಾಕುವಂತೆ ಹೇಳಿ ತಳ್ಳಿದಾಗ ಪಿರ್ಯಾದುದಾರರು ಬಾಗಿಲು ತೆಗೆದಿರುತ್ತಾರೆ.  ಆಗ  ಅವರುಗಳು ಪಿರ್ಯಾದಿ ಮತ್ತು ಅವರೊಂದಿಗೆ ಇದ್ದ ರುದ್ರೇಶ ರವರ ಮೇಲೆ ಕೈಗಳಿಂದ ಹಲ್ಲೆ ನಡೆಸಿ ಟೇಬಲ್ ಮೇಲಿದ್ದ 18000ರೂ ನಗದು ಹಣವನ್ನು ತೆಗೆದುಕೊಂಡಿರುತ್ತಾರೆ. ಹಣವನ್ನು ಪಿರ್ಯಾದಿ ಮತ್ತು ರುದ್ರೇಶ್ ವಾಪಸು ತೆಗೆದುಕೊಂಡಾಗ ಮೂರು ಜನ ಅಪರಿಚಿತರು ಹಣವನ್ನು ಕಿತ್ತುಕೊಂಡು ಬಂಕಿನ ಒಳಗೆ ಇಟ್ಟಿದ್ದ ಡೀಸಲ್  ತುಂಬಿಸಿದ್ದ 35 ಲೀಟರ್ ಕ್ಯಾನನ್ನು ತೆಗೆದುಕೊಂಡು ಹೋಗಿರುತ್ತಾರೆ  ಇತ್ಯಾದಿ
ಮೋಟಾರ್ ಸೈಕಲ್ ಕಳ್ಳತನ
ಮೂಡಿಗೆರೆ ಪೊಲೀಸ್‌ ಠಾಣೆ ಮೊ.ಸಂ. 06/2014ಕಲಂ:379 ಐಪಿಸಿ – ಪಿರ್ಯಾದಿ ಸಿಲ್ವನ್‌ ಡಿಸೋಜ ಅತ್ತಿಗೆರೆ ಗ್ರಾಮ ವಾಸಿ ಇವರು ದಿನಾಂಕ 27/01/2014 ರಂದು ಪಿರ್ಯಾದಿ ಗೆಳೆಯ ಮಂಗಳೂರು ತಾಲ್ಲೂಕು ಬಡಗು ಮಿಜಾರ್ ಗ್ರಾಮದ ಕುಮಾರ್ ರವರ ಬಾಬ್ತು ಮೋಟಾರ್ ಸೈಕಲ್ ನಂಬರ್ ಕೆ,ಎ- 19, ಆರ್-6974 ಸಂಖ್ಯೆಯ ಕೇಸರಿ ಪಟ್ಟಿ ಇರುವ ಕಪ್ಪು ಬಣ್ಣದ ಹೀರೋ ಹೊಂಡಾ ಸ್ಪ್ಲೆಂಡರ್ ಬೈಕನ್ನು ಅತಿಥಿ ಲಾಡ್ಜ್ ನ ಹೊರಬಾಗದಲ್ಲಿ ಸದರಿ ಬೈಕನ್ನು ನಿಲ್ಲಿಸಿ, ಬೆಳಿಗ್ಗೆ ಎದ್ದು, ನೋಡಲಾಗಿ ಬೈಕ್ ಅಲ್ಲಿ ಇರಲಿಲ್ಲ. ಪತ್ತೆ ಮಾಡಿಕೊಡಲು ಕೋರಿ.
ಜೂಜಾಟ ಪ್ರಕರಣ
ಬೀರೂರು  ಪೊಲೀಸ್‌ ಠಾಣೆ ಮೊ.ಸಂ. 12/2014ಕಲಂ:87 ಕೆಪಿ ಆಕ್ಟ್-   ದಿನಾಂಕ 28/01/2014 ರಂದು 1820 ಗಂಟೆಯಲ್ಲಿ ಸಿಪಿಐ ಬೀರೂರು ಇವರು ಕಛೇರಿಯಲ್ಲಿರುವಾಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅಮೃತ್‌ಮಹಲ್‌ ಬಳಿ ಸಿಬ್ಬಂದಿಗಳೊಂದಿಗೆ ಹೋಗಿ ನೋಡಲಾಗಿ 5-6 ಜನರು ವೃತ್ತಕಾರವಾಗಿ ಕುಳಿತುಕೊಂಡು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದು, ಪೊಲೀಸ್‌ರವರನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದರವರನ್ನು ಹಿಡಿದು ಅವರು ಆಟಕ್ಕೆ ಉಪಯೋಗಿಸಿದ ಚಾಪೆ  ಅಖಾಡಕ್ಕೆ ಬಳಸಿದ ಹಣ 2870/- ರೂ ಮತ್ತು 52 ಇಸ್ಪೀಟು ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಗಳಾದ ಮುದಿಯಪ್ಪ ಹಾಗು ಇತರೆ 5 ಜನರನ್ನು ದಸ್ತಗಿರಿ ಮಾಡಿರುತ್ತೆ
ಅಪಘಾತದಲ್ಲಿ ಸಾವು
ಕುದುರೆಮುಖ  ಪೊಲೀಸ್‌ ಠಾಣೆ ಮೊ.ಸಂ. 03/2014ಕಲಂ:279 304(ಎ) ಐಪಿಸಿ ರೆ.ವಿ 134(ಎ)(ಬಿ) ಐಎಂವಿ ಆಕ್ಟ್ - ದಿನಾಂಕ:-29.01.2014 ರಂದು ಬೆಳಿಗ್ಗೆ 07.30 ಗಂಟೆಗೆ  ಡಿ ಎನ್ . ಉಮಾಶಂಕರ್ ತುಮಕೂರು ನಗರ  ಇವರು  ದೂರು ನೀಡಿದ್ದು ಇವರ ತಮ್ಮನಾದ  ಡಿ .ಎನ್. ವೇದಾಂತ  ಬಿನ್ ನಾರಾಯಣಚಾರ್ 19 ವರ್ಷ  2 ನೇ ಬಿ ಇ ವಿಧ್ಯಾರ್ಥಿ  ವಾಸ  ಎಸ್ ಎಸ್ ಪುರಂ ತುಮಕೂರು ನಗರ   ಈತನು ತನ್ನ ಸ್ನೇಹಿತನಾದ  ಕೆ.ಎನ್ ಸಂತೋಷ ಬಿನ್ ಲೇ|| ನರಸಿಯಪ್ಪ  21 ವರ್ಷ ವಾಸ ತುಮಕೂರು ನಗರ ಈತನೊಂದಿಗೆ ಕೆಎ-06 ಇಕೆ-4549 ಅಪಾಚಿ ಆರ್ ಟಿ ಆರ್ 160 ಟಿ ವಿ ಎಸ್ ಬೈಕ್ ನಲ್ಲಿ ಹೊರನಾಡು ಮತ್ತು ಉಡುಪಿ ನೋಡಲೆಂದು ದಿನಾಂಕ:-25.01.2014 ರಂದು ಬಂದು ಹೊರನಾಡಿನಲ್ಲಿ  ದೇವರ ದರ್ಶನ ಮಾಡಿಕೊಂಡು ನಂತರ ಉಡುಪಿಗೆ ಹೋಗಲೆಂದು ದಿನಾಂಕ:-25.01.2014 ರಂದು ಮಧ್ಯಾಹ್ನ 14.00 ಗಂಟೆಯ ಸಮಯದಲ್ಲಿ ಕಳಸ- ಕುದುರೆಮುಖ ರಸ್ತೆಯ ನಲ್ಲೀಬೀಡು ಎಸ್ ತಿರುವಿನಲ್ಲಿ  ಬರುತ್ತಿರುವಾಗ ಬೈಕ್ ಚಾಲನೆ ಮಾಡುತಿದ್ದ  ಕೆ ಎನ್ ಸಂತೋಷನು  ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದಾ ಚಲಾಯಿಸಿದ್ದರ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ  ರಸ್ತೆಗೆ ಬಿದ್ದ ಪರಿಣಾಮ ಬೈಕ್ ನ ಹಿಂಬಂದಿ ಕುಳಿತಿದ್ದ  ಪಿರ್ಯಾದುದಾರರ ತಮ್ಮ ಡಿ.ಎನ್ ವೇದಾಂತನಿಗೆ ಎಡಕಾಲು ಮುರಿದು. ಮೈ ಕೈಗೆ ಪೆಟ್ಟಾಗಿದ್ದು  ತಕ್ಷಣ 108  ಅಂಬ್ಯುಲೆನ್ಸ್ ನಲ್ಲಿ ಮಣಿಪಾಲ್ ಕೆ ಎಂ ಸಿ ಆಸ್ಪತ್ರಗೆ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:-28.01.2014 ರಂದು 17.20 ಗಂಟೆಗೆ ಮೃತಪಟ್ಟಿರುತ್ತಾರೆ  ಈ ಅಪಘಾತದಲ್ಲಿ ಬೈಕ್ ಚಲಾಯಿಸುತಿದ್ದ ಕೆ ಎನ್ ಸಂತೋಷನಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿದ್ದು ಸಂತೋಷನು ಬೈಕನ್ನು ಸ್ಥಳದಿಂದ ತೆಗೆದುಕೊಂಡು ಹೋಗಿರುತ್ತಾನೆ 

Press Note : Dated:28/01/2014



f¯Áè ¥Éưøï C¢üÃPÀëPÀgÀªÀgÀ PÀbÉÃj, aPÀ̪ÀÄUÀ¼ÀÆgÀÄ f¯Éè, aPÀ̪ÀÄUÀ¼ÀÆgÀÄ.
¥ÀwæPÁ ¥ÀæPÀluÉ
¢£ÁAPÀ: 28/01/2014.
       £ÀUÀgÀzÀ PÉ®ªÀÅ D¸ÀàvÉæUÀ¼À ªÉÄÃ¯É ºÁUÀÆ ªÉÊzÀågÀ ªÉÄÃ¯É «£ÁB PÁgÀt ºÀ¯ÉèUÀ¼ÀÄ £ÀqÉAiÀÄÄwÛzÀÄÝ, EzÀgÀ »£À߯ÉAiÀÄ°è C£ÉÃPÀ zÀĵÀÖ ±ÀQÛUÀ¼ÀÄ F ¸ÀAzÀ¨sÀðªÀ£ÀÄß §¼À¹PÉÆAqÀÄ £ÀUÀgÀzÀ°è ±ÁAw ªÀÄvÀÄÛ ¸ÀĪÀåªÀ¸ÉÜAiÀÄ£ÀÄß ºÀzÀUÉqÀĸÀĪÀ ¸ÀAzÀ¨sÀðUÀ¼À°è aPÀ̪ÀÄUÀ¼ÀÆgÀÄ ¥Éưøï E¯ÁSÉAiÀÄÄ ¸ÀA§AzsÀ¥ÀlÖªÀgÀ «gÀÄzÀÞ THE KARNATAKA PROHIBITION OF VIOLENCE AGAINST MEDICARE SERVICE PERSONNEL AND DAMAGE TO PROPERTY IN MEDICARE SERVICE INSTITUTIONS ACT, 2009 CrAiÀÄ°è PÀlÄÖ¤nÖ£À PÀæªÀÄ PÉÊUÉƼÀî¯ÁUÀĪÀÅzÀÄ. DzÀÝjAzÀ ¸ÁªÀðd¤PÀgÀÄ gÉÆÃVUÀ¼À »vÀ ºÁUÀÆ ªÉÊzÀågÀ ¸ÀzÀâ¼ÀPÉ ªÀiÁrPÉƼÀî¨ÉÃPÉAzÀÄ. E£ÀÄß ªÀÄÄAzÉ ªÉÊzÀågÀÄ ºÁUÀÄ ªÉÊzÀåQÃAiÀÄ ¹§âA¢UÀ¼À ªÉÄÃ¯É ºÀ¯Éè ªÀiÁrzÀªÀgÀ ªÉÄÃ¯É PÀæªÀÄ PÉÊUÉƼÀî¯ÁUÀĪÀÅzÀÄ ºÁUÀÆ C¸ÀàvÉæAiÀÄ ¹§âA¢ & ªÉÊzÁå¢üPÁjUÀ½UÉ ¸ÀÆPÀÛ gÀPÀëuÉ MzÀV¸À¯ÁUÀĪÀÅzÀÄ.

Tuesday, January 28, 2014

Daily Crimes Report Dated:27-28/01/2014



ಸುಲಿಗೆ ಪ್ರಕರಣ
ಬಸವನಹಳ್ಳಿ  ಪೊಲೀಸ್‌ ಠಾಣೆ ಮೊ.ಸಂ.20/2014ಕಲಂ:394 ಐಪಿಸಿ – ದಿನಾಂಕ 26/01/2014 ರಂದು 2245 ಗಂಟೆಯಲ್ಲಿ ಸಂದ್ಯಾ ಸರ್ವಿಸ್‌ ಸ್ಟೇಷನ್‌ನ ಪೆಟ್ರೋಲ್ ಬಂಕಿನ ಕೆಲಸಗಾರರಾದ  ಪಿರ್ಯಾದಿ ಗುರುರಾಜ್‌ ಅರಸ್‌ ಮತ್ತು ರುದ್ರೇಶರವರು ಪೆಟ್ರೋಲ್ ಬಂಕಿನ ಒಳಗೆ ಊಟ ಮಾಡುತ್ತಿದ್ದಾಗ ಕೆಎ.46 ಇ.4165 ಡಿಸ್ಕವರ್ ಮೋಟಾರ್ ಸೈಕಲ್ಲಿನಲ್ಲಿ ಮೂರು ಜನ ಅಪರಿಚಿತರು ಬಂದು ಪೆಟ್ರೋಲ್ ಹಾಕುವಂತೆ ಹೇಳಿ ಬಂಕಿನ ಗ್ಲಾಸ್ ತಳ್ಳಿದಾಗ ಬಾಗಿಲು ತೆಗೆದಿರುತ್ತಾರೆ.  ಕೈಗಳಿಂದ ಹಲ್ಲೆ ನಡೆಸಿ ಟೇಬಲ್ ಮೇಲಿದ್ದ 18000ರೂ ನಗದು ಹಣವನ್ನು ತೆಗೆದುಕೊಂಡಿರುತ್ತಾರೆ. ಮೂರು ಜನ ಅಪರಿಚಿತರು ಹಣವನ್ನು ಕಿತ್ತುಕೊಂಡು ಬಂಕಿನ ಒಳಗೆ ಇಟ್ಟಿದ್ದ ಡೀಸಲ್  ತುಂಬಿಸಿದ್ದ 35 ಲೀಟರ್ ಕ್ಯಾನನ್ನು ತೆಗೆದುಕೊಂಡು ಹೋಗಿರುತ್ತಾರೆ.
ಹುಡುಗಿ ಕಾಣೆ 
ಅಜ್ಜಂಪುರ ಪೊಲೀಸ್‌ ಠಾಣೆ ಮೊ.ಸಂ.25/2014ಕಲಂ:ಹುಡುಗಿ ಕಾಣೆ  ದಿನಾಂಕ 27/01/2014 ರಂದು ನಾರಯಣಪುರ ಗ್ರಾಮದಿಂದ ಪಿರ್ಯಾದುದಾರರಾದ ನಟರಾಜ ಇವರ 2ನೇ ಮಗಳಾದ ಸುಪ್ರೀತ ದ್ವೀತಿಯ ಪಿಯುಸಿ ಯಲ್ಲಿ ವಿದ್ಯಾಬ್ಯಾಸ ಮಾಡಿತ್ತಿದ್ದು ರಾತ್ರಿ ಮನೆಯಲ್ಲಿ ನಾವು ಎಲ್ಲರೂ ಮಲಗಿರುವಾಗ ಮನೆಯಲ್ಲಿ ಯಾರಿಗೂ ತಿಳಿಯದ ಹಾಗೆ ಬೆಳಗಿನ ಜಾವದ ಸಮಯದಲ್ಲಿ ಅಜ್ಜಿಯ ಪಕ್ಕದಲ್ಲಿ ಮಲಗಿದ್ದವಳು ಯಾರಿಗೂ ತಿಳಿಸದೇ ಎಲ್ಲಿಗೋ ಹೋಗಿದ್ದು ವಿಚಾರ ಮಾಡಿದರೂ ಸುಪ್ರೀತಳೂ ಸಿಕ್ಕಿರುವುದಿಲ್ಲ ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ
ಹುಡುಗಿ ಕಾಣೆ 
ತರೀಕೆರೆ  ಪೊಲೀಸ್‌ ಠಾಣೆ ಮೊ.ಸಂ.21/2014ಕಲಂ:ಹುಡುಗಿ ಕಾಣೆ  – ದಿನಾಂಕ 26/01/2014 ರಂದು  ಪಿರ್ಯಾದುದಾರರಾದ ಕುಮಾರ ಹಳಿಯೂರು ಗೇಟ್‌ ವಾಸಿ ಇವರ  ಮೊದಲನೇ ಮಗಳಾದ ಸುಮಾ 19 ವರ್ಷ ಮನೆ ಬಿಟ್ಟು ಕಾಣೆಯಾಗಿರುತ್ತಾಳೆ ತನ್ನ ಹೆಂಡತಿ ಸ್ನೇಹಿತರ ಮನೆಗೆ ಹೋಗಿರಬಹುದೆಂದು ತಿಳಿದಿದ್ದು ಹುಡುಕಾಡಿದರೂ ಸಿಕ್ಕಿರುವುದಿಲ್ಲ, ಈಗ ನಮ್ಮ ಊರಿನ ಮಲ್ಲಿಕ ಬಿನ್ ಓಂಕಾರಪ್ಪ ಹಳಿಯೂರು ಎಂಬುವವರು  ನಮ್ಮ ಮಗಳನ್ನು ಕರೆದುಕೊಂಡು ಹೋಗಿರುತ್ತಾನೆ ಎಂಬ ಅನುಮಾನವಿರುತ್ತೆ, ಅವನೂ ಸಹ ಕಾಣೆಯಾಗಿರುತ್ತಾನೆ,ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ.
ಜೂಜಾಟ ಪ್ರಕರಣ
ಲಕ್ಕವಳ್ಳಿ  ಪೊಲೀಸ್‌ ಠಾಣೆ ಮೊ.ಸಂ.25/2014ಕಲಂ:78 ಕ್ಲಾಸ್(3) ಕೆಪಿ ಆಕ್ಟ್ ಜೊತೆಗೆ 420 ಐಪಿಸಿ   – ದಿನಾಂಕ 27/01/2014 ರಂದು 1630 ಗಂಟೆಯಲ್ಲಿ ಹುರುಳಿಬೋರೆ ಎಂಬಲ್ಲಿ ಒಬ್ಬ ವ್ಯಕ್ತಿ ಓಡಾಡುತ್ತಾ ಕ್ಯಾಂಟೀನ್ ಗೆ ಬರುವವರಿಗೆ ಮತ್ತು ಹೋಗುವವರಿಗೆ ಬನ್ನಿ 1 ರೂ ಕಟ್ಟಿದರೆ 80 ರೂಪಾಯಿ, 10 ರೂ ಕಟ್ಟಿದರೆ 800 ರೂಪಾಯಿ, 100 ರೂ ಕಟ್ಟಿದರೆ 8.000/-ರೂ ಹಣ ಕೊಡುತ್ತೇವೆ, ನೀವು ಕಟ್ಟಿದ 3 ಗಂಟೆಯಲ್ಲಿ ನಿಮ್ಮ ಹಣ ವಾಪಾಸ್ ಕೊಡುತ್ತೇವೆಂದು ಕೂಗಿ ಕರೆಯುತ್ತಿದ್ದನು. ಯಾವುದೇ ಪರವಾನಗಿ ಇಲ್ಲವೆಂದು ನುಡಿದನು ಪರಿಶೀಲನೆ ಮಾಡಲಾಗಿ ಒಟ್ಟು 520/-ರೂ ಹಣವಿರುತ್ತದೆ. ಅಲ್ಲದೇ ಹಣದ ಜೊತೆಯಲ್ಲಿ ಒಂದು ಬಿಳಿ ಪೇಪರ್ ನಲ್ಲಿ ಮಟ್ಕಾ ನಂಬರ್ ಬರೆದಿರುವ 1 ಚೀಟಿ ಹಾಗೂ ಒಂದು ಬಾಲ್ ಪೆನ್ ಇರುತ್ತದೆ. ಮಟ್ಕಾ ಚೀಟಿ ಬರೆಯಲು ಮುಗ್ದ ಜನರು ಹಾಗೂ ಕೂಲಿ ಕಾರ್ಮಿಕರಿಗೆ ನಂಬಿಸಿ 1 ರೂಗೆ 80 ರೂ ಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮುಗ್ದ ಜನರಿಗೆ ಹಣವನ್ನು ವಾಪಾಸ್ ಕೊಡದೇ ಯಾವುದೇ ಮಟ್ಕಾ ನಂಬರ್ ಗೆ ಹಣ ಕಟ್ಟದೇ ಹಣ ಹೊಡೆದಿಲ್ಲವೆಂದು ಹೇಳಿ ಮೋಸ ಮಾಡುತ್ತಿರುತ್ತಾನೆ. ಆರೋಪಿ ಉಮೇಶ್‌ ಆಗಿದ್ದು ಈತನನ್ನು ದಸ್ತಗಿರಿ ಮಾಡಿ ಕ್ರಮಕೈಗೊಂಡಿರುತ್ತೆ.