Wednesday, August 28, 2013

Daily Crimes Report Dated:27/08/2013


ಸುಲಿಗೆ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ. 167/2013 ಕಲಂ; 392 ಐಪಿಸಿ ಪಿರ್ಯಾದುದಾರರಾದ ಸೀತಾ ಕಣದಾಳ್‌ ವಾಸಿ ಇವರು ದಿನಾಂಕ 27/08/2013 ರಂದು 1650 ಗಂಟೆಯಲ್ಲಿ  ಕಣದಾಳ್ ರಸ್ತೆಯಲ್ಲಿರುವ ತಮ್ಮ ವಾಸದ ಮನೆಗೆ ತೆರಳಲು ಬರುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದು ಕಪ್ಪು ಬಣ್ಣದ ಬೈಕ್ ನಲ್ಲಿ ಸೈಂಟ್ ಮೇರೀಸ್ ಸ್ಕೂಲ್ ರಸ್ತೆಯಿಂದ ನನ್ನ ಮೇಲೆ ಬೈಕ್ ನುಗ್ಗಿಸುವ ರೀತಿಯಲ್ಲಿ ಬಂದು ಬೈಕ್ ನಿಧಾನಿಸಿ ಹಿಂದೆ ಕುಳಿತಿದ್ದ ವ್ಯಕ್ತಿಯು ನನ್ನ ಕೊರಳಿಗೆ ಕೈ ಹಾಕಿ ನನ್ನ ಕೊರಳಲ್ಲಿದ್ದ ಸುಮಾರು 55 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡನು.ನನ್ನ ಕಳುವಾದ ಸರ 45 ಗ್ರಾಂ ಚಿನ್ನದ ಸರ ಹಾಗೂ (ಮೂರು ಮಾಂಗಲ್ಯ ಹಾಗೂ ಕೊಂಡಿ)  ಒಟ್ಟು 10 ಗ್ರಾಂ  ಆಗಿದ್ದು ಒಟ್ಟು 55 ಗ್ರಾಂ ಆಗಿದ್ದು ಇದರ ಅಂದಾಜು ಬೆಲೆ 1.20.000/- ಆಗಿರುತ್ತೆ. ಇತ್ಯಾದಿ
ಜುಜಾಟ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ. 207/2013 ಕಲಂ; 87 ಕೆ.ಪಿ. ಆಕ್ಟ್ ಪಿರ್ಯಾದುದಾರರಾದ ಠಾಣಾ ಹೆಚ್.ಸಿ 31 ನಾಗೇಶ ರವರು  ಠಾಣಾ ಪಿ.ಸಿ.65 ಪ್ರಸನ್ನ ಕುಮಾರ್ ರವರಿಗೆ ಗಸ್ತು ನೇಮಕವಾದ ಮೇರೆಗೆ ಸದರಿಯವರು ದಿನಾಂಕ 27/08/2013 ರಂದು 1430 ಗಂಟೆಯಲ್ಲಿ  ನಗರವನ್ನು ಗಸ್ತುಮಾಡುತ್ತಾ ನಗರದ ಖಾಸಾಗಿ ಬಸ್ನಿಲ್ದಾಣದ ಸೀನನ ಅಂಗಡಿ ಮುಂಬಾಗ ಸಾರ್ವಜನಿಕ ಸ್ಥಳದಲ್ಲಿ ಗುಂಪುಕಟ್ಟಿಕೊಂಡು ಆರೋಪಿ ಸಂತೋಷ ಈತನು 1 ರೂ ಗೆ 80 ರೂ ಮತ್ತು 10 ರೂ ಕಟ್ಟಿದರೆ 800 ರೂ ಕೊಡುವುದಾಗಿ ನಂಬರ್ಅನ್ನು ಚೀಟಿಯಲ್ಲಿ ಬರೆದು ಕೊಡುತ್ತಿದ್ದು ಸದರಿ ವ್ಯಕ್ತಿಯನ್ನು ಹಿಡಿದು ಅಂಗಶೋದನೆ ಮಾಡಲಾಗಿ ಮಟ್ಕಾ ಜೂಜಾಟಕ್ಕೆ ಬಳಸಿದ ಒಂದು ಪೆನ್ನು ಮಟ್ಕಾ ಚೀಟಿ ಸಾರ್ವಜನಿಕರಿಂದಾ ವಸೂಲಿಮಾಡಿದ 500 ರೂ ಹಣವನ್ನು ವಶಕ್ಕೆ ಪಡೆದು ವರದಿ ನೀಡಿದ್ದಾಗಿದೆ.
 

Tuesday, August 27, 2013

Daily Crimes Report Dated:26/08/2013


ಅಪಘಾತದಲ್ಲಿ ಸಾವು
ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ. 315/2013 ಕಲಂ; 279 337 304(ಎ) ಐಪಿಸಿ ದಿನಾಂಕ 26/08/2013 ರಂದು 1930 ಗಂಟೆಯಲ್ಲಿ ಅಪಘಾತ ನಡೆದಿದ್ದು ಪಿರ್ಯಾದುದಾರರಾದ ವಿಶ್ವನಾಥ ಇವರು ದೂರು ನೀಡಿದ್ದು, ಲೋಕೇಶ ತಮ್ಮ ಬಾಬ್ತು ಹಿರೋಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂ ಕೆಎ-18. ಜೆ- 3675 ರಲ್ಲಿ ತನ್ನ ಮಗ ಭರತ್‌ನ್ನು ಹಿಂಬಾಗದಲ್ಲಿ ಕೂರಿಸಿಕೊಂಡು ಗವನಹಳ್ಳಿ ಸಮೀಪ ಸಿಪಾನಿ ಸಾಮಿಲ್ ಗೇಟ್‌ನ ಮುಂಭಾಗದಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಅಂದರೆ ಮೂಡಿಗೆರೆ ಕಡೆಯಿಂದ Tata Mazic vehicle  No KA-18. N- 8491 ರ ಆರೋಪಿ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಮೋಟಾರ್ ಸೈಕಲ್ ಓಡಿಸುತ್ತಿದ್ದ  ಲೋಕೇಶನಿಗೆ ತೀವ್ರವಾಗಿ ಗಾಯಗೊಂಡು ಹಿಂಭಾಗದಲ್ಲಿ ಕುಳಿತಿದ್ದ ಭರತ್ ನಿಗೂ ಸಹ ಕೈಕಾಲುಗಳಿಗೆ ರಕ್ತಗಾಯವಾಗಿದ್ದು ತಕ್ಷಣ ಯಾವುದೋ ಆಟೋ ರಿಕ್ಷಾ ದಲ್ಲಿ ಚಿಕಿತ್ಸೆ ಕೊಡಿಸುವ ಸಲುವಾಗಿ ಚಿಕ್ಕಮಗಳೂರು ಜಿಲ್ಲಾ ಮಲ್ಲೇಗೌಢ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮದ್ಯೆದಲ್ಲಿಯೇ ಲೋಕೇಶ ಮೃತಪಟ್ಟಿದ್ದಾಗಿರುತ್ತೆ.
ಕಳೂವು ಪ್ರಕರಣ
ಬಾಳೆಹೊನ್ನುರು  ಪೊಲೀಸ್ ಠಾಣೆ ಮೊ.ಸಂ. 156/2013 ಕಲಂ; 457 380  ಐಪಿಸಿ ಪಿರ್ಯಾದಿ ಸಯಕದ್‌ ಕಣಬೂರು ವಾಸಿ ಇವರು  ದಿನಾಂಕ 25/08/2013 ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ತನ್ನ ಹೆಂಡತಿಯೊಂದಿಗೆ ಅತ್ತೆ ಮನೆಯಾದಕೊಪ್ಪಕ್ಕೆ ಹೊಗಿದ್ದು, ಮಾರನೇ ದಿನ  ಬೆಳಿಗ್ಗೆ  07:00 ಗಂಟೆಗೆ  ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ  ಹಿಂಭಾಗದ ಡೋರ್ ನ್ನು  ಯಾವುದೋ ಆಯುಧದಿಂದ ಮೀಟಿ ತೆರೆದು ಒಳ ಪ್ರವೇಶಿಸಿ   ಬೆಡ್ ರೂಂ  ನಲ್ಲಿದ್ದ ಗಾಡ್ರೇಜ್ ಬೀರುವನ್ನು ಮತ್ತು ಅದರ ಒಳಗಿನ  ಸೇಫ್  ಲಾಕರ್ ಗಳನ್ನು  ಸಹ ಯಾವುದೋ  ಆಯುಧದಿಂದ ಮೀಟಿ  ತೆರೆದು ಅದರಲ್ಲಿದ್ದ  1] 12 ಗ್ರಾಂ ತೂಕದ ಒಂದು ಚಿನ್ನದ ಬ್ರಾಸ್ ಲೈಟ್ 2) ಸುಮಾರು 01 ಗ್ರಾಂ  ತೂಕದ ಒಂದು ಜೊತೆ ಕಿವಿಯ   ಬುಗಡಿಗಳನ್ನು ಕಳವುಮಾಡಿಕೊಂಡು ಹೋಗಿರುತ್ತಾರೆ, ಕಳವು ಮಾಡಿಕೊಂಡು ಹೋಗಿರುವ ಆಭರಣಗಳ ಬೆಲೆ ಸುಮಾರು 23.000/- ಆಗಿರುತ್ತದೆ,
ಜೂಜಾಟ ಪ್ರಕರಣ
ತರೀಕೆರೆ  ಪೊಲೀಸ್ ಠಾಣೆ ಮೊ.ಸಂ. 205/2013 ಕಲಂ; 87 ಕೆ.ಪಿ.ಆಕ್ಟ್   ಜೂಜಾಟದ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಪಿಎಸ್‌ಐ ರವರು ದಿನಾಂಕ 26/08/2013 ರಂದು 1630 ಗಂಟೆಗೆ ಠಾಣಾ ಸಿಬ್ಬಂದಿಗಳು ಹಾಗು ಪಂಚರೊಂದಿಗೆ ತರೀಕೆರೆ ನಗರದ ಚಿಕ್ಕೆರೆ ಕೆರೆಯ ಹತ್ತಿರ ಸಾರ್ವಜನಿಕ ರಸ್ತೆಗೆ  ಸಂಜೆ 16-30 ಗಂಟೆಗೆ ಹೋಗಿ ನೋಡಲಾಗಿ 3 ಜನ ಆರೋಪಿಗಳು 1 ರೂ ನ ಎರಡು ನಾಣ್ಯಗಳನ್ನು ಇಟ್ಟುಕೊಂಡು ತೂರೆಬಿಲ್ಲೆ ಜೂಜಾಟ ಆಡುತ್ತಿದ್ದು, ಸದರಿಯವರ ಮೇಲೆ ಸಿಬ್ಬಂದಿಗಳ ಸಹಾಯದಿಂದ ದಾಳಿ ನಡೆಸಿ ಹಿಡಿದು ಪಂಚರ ಸಮಕ್ಷಮ ಪಂಚನಾಮೆ ಜರುಗಿಸಿ ಪಣಕ್ಕೆ ಕಟ್ಟಿದ್ದ 860-00 ರೂ ಹಣ ಹಾಗು ಜೂಜಾಟಕ್ಕೆ ಬಳಸಿದ ವಸ್ತಗಳೊಂದಿಗೆ ಬಂದು ವರದಿ ನೀಡಿದ್ದಾಗಿದೆ ಆರೋಪಿಗಳಾದ ರಮೇಶ ಹಾಗೂ ಇತರೆ 2 ಜನರನ್ನು ದಸ್ತಗಿರಿ ಮಾಡಿರುವುದಾಗಿರುತ್ತೆ.  

Monday, August 26, 2013

Daily Crimes Report Dated:25/08/2013


ವಂಚನೆ ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ. 166/2013 ಕಲಂ; 465 468 471 420 ಐಪಿಸಿ ಈ ಕೇಸಿನ ಸಾರಾಂಶವೇನೆಂದರೆ ಪಿರ್ಯಾದುದಾರರಾದ  ಜಿಲ್ಲಾಧಿಕಾರಿಗಳು ರವರ ದೂರಿನಲ್ಲಿ ಚಿಕ್ಕಮಗಳೂರು ಜಿಲ್ಲೆ ಕಂದಾಯ ಘಟಕದ  53 ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮೂಲಕ ದಿನಾಂಕ 07-07-2013 ರಂದು ಅಧಿಸೂಚನೆ ಹೊರಡಿಸಿ  ಅರ್ಜಿ ಆಹ್ವಾನಿಸಿದ್ದು  ಸದರಿ ಹುದ್ದೆಗೆ ಪಿಯುಸಿ ವಿದ್ಯಾರ್ಹತೆಯನ್ನು  ನಿಗದಿ ಪಡಿಸಿದ್ದಾಗಿರುತ್ತೆ.  ಅದರಂತೆ ಶ್ರೀ ವಿ. ಮಂಜುನಾಥ ಬಿನ್ ವೆಂಕಟೇಶಪ್ಪ  ಮರಕಲಘಟ್ಟ  ಗ್ರಾಮ,  ಮಿಟ್ಟೂರು ಅಂಚೆ , ಕೋಲಾರ ತಾಲೂಕು ಮತ್ತು ಜಿಲ್ಲೆ.  ರವರು  ರೆಪರೆನ್ಸ್ ನಂ 119385 ರಲ್ಲಿ  ಅರ್ಜಿ ಸಲ್ಲಿಸಿದ್ದು  ಇರುತ್ತೆ.  ಸದರಿಯವರು  ನೇಮಕಾತಿಗಾಗಿ  ಪಿಯುಸಿ ಅಂಕಪಟ್ಟಿ ನೊಂದಣಿ ಸಂಖ್ಯೆ 282099 ಅನ್ನು  ಸಲ್ಲಿಸಿದ್ದರ ಮೇರೆಗೆ  ಅದನ್ನು ಪರಿಗಣಿಸಿ ಜೇಷ್ಠತೆ ಆಧಾರದ ಮೇಲೆ ಸದರಿಯವರನ್ನು ದಿನಾಂಕ 15-11-2012 ರಂದು  ಕಡೂರು ತಾಲೂಕು ಹಿರೇನಲ್ಲೂರು ಹೋಬಳಿ ನಾಡ ಕಛೇರಿಯ ಗ್ರಾಮ ಲೆಕ್ಕಾಧಿಕಾರಿಯಾಗಿ  ನಿಯುಕ್ತಿ ಮಾಡಿ ನೇಮಕ ಮಾಡಲಾಗಿರುತ್ತೆ. ಸದರಿ ಅಭ್ಯರ್ಥಿಯು ದಿನಾಂಕ 12-06-2013 ರಂದು ಮನವಿ ಸಲ್ಲಿಸಿ ತನ್ನ ಮೂಲ ದಾಖಲಾತಿಗಳನ್ನು ಹಿಂದಿರುಗಿಸುವ ಬಗ್ಗೆ ಕಡತ ಮಂಡಿಸಿದ್ದು  ಆ ಹಂತದಲ್ಲಿ  ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂಕಗಳಲ್ಲಿ  ತುಂಬಾ ಅಂತರವಿರುವುದನ್ನು ಗಮನಿಸಿ ಪರಿಶೀಲನೆಗಾಗಿ ದಿನಾಂಕ 24-06-2013 ರಂದು ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವರಿಗೆ ಕೋರಿಕೊಂಡ ಮೇರೆಗೆ ಸದರಿಯವರು  ಅಭ್ಯರ್ಥಿಯು ಸಲ್ಲಿಸಿದ್ದ ಅಂಕಪಟ್ಟಿಯು  ನೈಜತೆ ಹೊಂದಿರುವುದಿಲ್ಲಾ [ NOT GENUINE]  ಎಂಬ ಮಾಹಿತಿಯನ್ನು  ನೀಡಿದ್ದಲ್ಲದೆ  ಆದರೆ  ಅಭ್ಯರ್ಥಿಯು ನೇಮಕಾತಿ ಸಮಯದಲ್ಲಿ  ಸಲ್ಲಿಸಿದ್ದ  ಪಿಯುಸಿ ಅಂಕಪಟ್ಟಿ ಯಲ್ಲಿ  ಪಿ.ಸಿ.ಎಂ.ಬಿ ವಿಷಯಗಳನ್ನು ತೆಗೆದುಕೊಂಡು ಒಟ್ಟಾರೆ. 600 ಅಂಕಗಳಿಗೆ 572 ಅಂಕಗಳನ್ನು ಪಡೆದಿರುವುದು ಇರುತ್ತೆ. ಮಂಜುನಾಥ ರವರು ಕೋಟಾ ಪಿಯುಸಿ ಅಂಕಪಟ್ಟಿ ಆಧಾರದ ಮೇಲೆ ಗ್ರಾಮ ಲೆಕ್ಕಿಗ ಹುದ್ದೆಗೆ  ಆಯ್ಕೆಯಾಗಿ  ನೇಮಕ ಆಗಿರುವುದು ಕಂಡು ಬಂದಿರುತ್ತೆ.  ಈ ಹಿನ್ನಲೆಯಲ್ಲಿ ತನ್ನ ನಿಜ ಬಣ್ಣ ಬಯಲಾಗಿದ್ದರಿಂದ ತನ್ನ ವಿರುದ್ದ ಜಿಲ್ಲಾಧಿಕಾರಿಗಳು ಕಾನೂನು ಕ್ರಮ ತೆಗೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಲು ಸದರಿ ಅಭ್ಯರ್ಥಿಯು ದಿನಾಂಕ 02-07-2013 ರಂದು ತನ್ನ ಹುದ್ದೆಗೆ ರಾಜೀನಾಮೆ ಮನವಿ ಸಲ್ಲಿಸಿರುವುದು ಸಹ ಇರುತ್ತೆ. ಈ ಬಗ್ಗೆ  ದಿನಾಂಕ 11-07-2013 ರಂದು ಪ್ರಜಾವಾಣಿ ದಿನಪತ್ರಿಕೆಯಲ್ಲಿ  ನಕಲಿ ಅಂಕಪಟ್ಟಿ ಸಲ್ಲಿಸಿ ಗ್ರಾಮ ಲೆಕ್ಕಾಧಿಕಾರಿಯಾಗಿ ನೇಮಕ ಗೊಂಡಿರುವ ಬಗ್ಗೆ ವರದಿಯಾಗಿರುತ್ತೆ.  ಈ ಹಿನ್ನಲೆಯಲ್ಲಿ ಶ್ರೀ ವಿ, ವಂಜುನಾಥ ಇವರ ವಿರುದ್ದ  ಅಕ್ರಮ ಮಾರ್ಗದ ಮೂಲಕ ಸರ್ಕಾರಿ  ನೇಮಕಾತಿ ಪಡೆಯುವ ಮೂಲಕ  ಸರ್ಕಾರಕ್ಕೆ ವಂಚನೆ ಮಾಡಿರುವ ಹಿನ್ನಲೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ ಮೇರೆಗೆ  ಕೇಸು ದಾಖಲಿಸಿರುತ್ತೆ.
ಹುಡುಗಿಯರ ಚುಡಾಯಿಸಿದಕ್ಕೆ ಸಂಬದಿಸಿದಂತೆ ಪ್ರಕರಣ
ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ. 313/2013 ಕಲಂ; 354(ಬಿ) 509 504 34 ಐಪಿಸಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಮಗಳೂರು  ಹೌಸಿಂಗ್‌ಬೋರ್ಡ್‌ ಬಡಾವಣೆಯಲ್ಲಿ ದಿನಾಂಕ: 25-08-2013 ರಂದು ಸಂಜೆ 5-30 ಗಂಟೆಯ ಸಮಯದಲ್ಲಿ ಎ.ಐ.ಟಿ ಕಾಲೇಜಿಗೆ ಹೋಗುವ ದಾರಿಯಲ್ಲಿನ  2 ನೇ ಗೇಟ್ ಸಮೀಪ ಪಿರ್ಯಾದುದಾರರಾದ ಕಾವೇರಿ ಬಿನ್‌ ಸತ್ಯಪಾಲ್‌ ಇವರು  ತನ್ನ ಮಗಳಾದ  ಐಶ್ವರ್ಯ ರವರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ರಘು ಎಂಬ ಆರೋಪಿತನು   ಎದುರುಗಡೆಯಿಂದ ತನ್ನ  ಆಟೋ ಚಾಲನೆ ಮಾಡಿಕೊಂಡು ಬರುತ್ತಿದ್ದವನು ನಮ್ಮಗಳನ್ನು ಕಂಡು  ಚುಡಾಯಿಸಿ ನಗಾಡಿಕೊಂಡು, ಆಟೋ ಆರ್ನ್‌ ಮಾಡಿಕೊಂಡು ಕಿಚಾಯಿಸಿಕೊಂಡು ಹೋಗಿದ್ದು ಪಿರ್ಯಾದುದಾರರ ಕೇಳಲು ಹೋದಾಗ ಅವರಿಗೂ ಸಹ  ಅವಾಚ್ಯವಾಗಿ ಬೈದು ಕೈಹಿಡಿದು ಸಾರ್ವಜನಿಕ ಸ್ಥಳದಲ್ಲಿ  ಎಳೆದಾಡಿದ್ದು ಈ ವಿಷಯ ತಿಳಿದು  ಸ್ಥಳಕ್ಕೆ ಬಂದ ಪಿರ್ಯಾದುದಾರರ ಪತಿ ಸತ್ಯಪಾಲ್ ರವರು ಕೇಳಲು ಹೋದಾಗ ಅವರಿಗೂ ಸಹ ಆಟೋದಲ್ಲಿದ್ದ ಎರಡೂ ಜನ ಆರೋಪಿತರುಗಳು  ಸತ್ಯಪಾಲ್ ರವರಿಗೆ   ಹಲ್ಲೆ ಮಾಡಲು ಪ್ರಯತ್ನಿಸಿರುತ್ತಾರೆ.