Sunday, March 31, 2013

Daily Crimes Report Dated:30/03/2013

ಮನುಷ್ಯ ಕಾಣೆ
ನಗರ ಪೊಲೀಸ್ ಠಾಣೆ ಮೊ.ಸಂ- 28/2013 ಕಲಂ ಮನುಷ್ಯ ಕಾಣೆ‌‌ದಿನಾಂಕ 28/03/2013 ರಂದು ಪಿರ್ಯಾದುದಾರರಾದ ಅನಂತಚಾರ್‌ ಹರಗೋಡು ವಾಸಿ ಇವರ ಸಂಬಂದಿಕರಾದ ಬಾಸ್ಕರ ಮತ್ತು ಭವಾನಿಯವರ ಜೊತೆಯಲ್ಲಿ ಶಿವಮೊಗ್ಗ ವಾಸಿಯಾದ ಪ್ರಶಾಂತ ಎಂಬುವವರು ನಮ್ಮ ಮನೆಗೆ ಬಂದು ನನ್ನ ಮಗಳಾದ ಶಿಲ್ಪ 22 ವರ್ಷ, ಇವಳನ್ನು ಪ್ರಶಾಂತನ  ತಮ್ಮ ಪ್ರೀತಿಸುತ್ತಿದ್ದು, ಈ ವಿಚಾರವು ನನ್ನ ತಂದೆ ತಾಯಿಯವರಿಗೆ ಒಪ್ಪಿಗೆ ಇಲ್ಲಾ ನಿಮಗೆ ಗೊತ್ತೆ ಎಂದು ಕೇಳಿದರು.ನಾನು ಇಲ್ಲಾ ಎಂದು ಹೇಳಿದೆ.ಈ ವಿಚಾರವನ್ನು ನನ್ನ ಮಗಳಿಗೂ ಸಹ ಹೇಳಿ ಅವರು ವಾಪಸ್ ಹೋದರು.ನನ್ನ ಮಗಳು ಗುಬ್ಬುಗೋಡಿನಲ್ಲಿರುವ ನನ್ನ ವಾಸದ ಮನೆಯಲ್ಲಿಯೇ ಉತ್ತರ ಪತ್ರಿಕೆಯನ್ನು ಮೌಲ್ಯ ಮಾಪನ ಮಾಡುತ್ತಿದ್ದು,  ನಾನು ಒಳಗೆ ಹೋಗಿ ಊಟ ಮಾಡಿ ರಾತ್ರಿ 09.00 ಗಂಟೆಗೆ ಬಂದು ನೋಡುವಷ್ಟರಲ್ಲಿ ನನ್ನ ಮಗಳು ಇರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ.
ಕೊಲೆ ಪ್ರಕರಣ
ಕಡೂರು ಪೊಲೀಸ್ ಠಾಣೆ ಮೊ.ಸಂ- 70/2013 ಕಲಂ 302 ಐಪಿಸಿ‌‌– ದಿನಾಂಕ 29/03/2013 ರಂದು ಕೃತ್ಯ ನಡೆದಿದ್ದು ಪಿರ್ಯಾದುದಾರರಾದ ಕುಮಾರ್ ಇವರು ರೈಲ್ವೇ ಸ್ಟೇಷನ್  ಗೆ ಹೋಗುವ ರಸ್ತೆಯಲ್ಲಿರುವ  ತಮ್ಮ ಬಾಬ್ತು  ಅಸೆಸ್‌ಮೆಂಟ್ ನಂ 7283/ಎ3 ರಲ್ಲಿ ಹೊಸದಾಗಿ ನಿರ್ಮಿಸುತ್ತಿರುವ  ಮಳಿಗೆಗಳ ಹತ್ತಿರ ಬಂದಿದ್ದು, ಮಳಿಗೆಗಳ ಹತ್ತಿರ ಜನ ಸೇರಿದ್ದನ್ನು ಕಂಡು   ಹತ್ತಿರ ಹೋಗಿ ನೋಡಲಾಗಿ ಮಳಿಗೆಯ ಹಿಂಭಾಗದಲ್ಲಿ  ಸುಮಾರು 25-30 ವರ್ಷ ಪ್ರಾಯದ ಒಂದು ಅಪರಿಚತ ಹೆಂಗಸಿನ ಶವವು ಅಂಗಾತವಾಗಿ ಬಿದ್ದಿರುತ್ತೆ.ಕುತ್ತಿಗೆಯಲ್ಲಿ ಯಾವುದೋ ಹಗ್ಗ ಅಥವಾ ಬೆಲ್ಟ್ ನಿಂದ  ಉಸಿರುಗಟ್ಟಿಸಿ ಸಾಯಿಸಿದಂತೆ ಕಂಡು ಬಂದಿರುತ್ತೆ. ಮತ್ತು ಸದರಿ ಶವವನ್ನು  ಮಳಿಗೆಗಳ ಓಣಿಯಿಂದ  ಎಳೆದು ತಂದು ಅಲ್ಲಿಗೆ ಬಿಟ್ಟಂತೆ ಕಂಡು ಬಂದಿರುತ್ತೆ.  ಯಾರೋ ದುರಾತ್ಮರು  ದಿ:29-03-2013 ರ  ರಾತ್ರಿ ಮೃತಳನ್ನು ಯಾವುದೋದುರುದ್ದೇಶದಿಂದ  ಕೊಲೆಮಾಡಿರುವಂತೆ ಕಂಡು ಬಂದಿದ್ದು  ಆಕೆಯ ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ. 

Saturday, March 30, 2013

Daily Crimes Report Dated:29/03/2013

ಕಳುವು ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ- 60/2013 ಕಲಂ 379 ಐಪಿಸಿ‌‌ದಿನಾಂಕ 27/03/2013 ರಂದು ಪಿರ್ಯಾದುದಾರರಾದ ಕುಮಾರ್‌‌ ಇವರು ಹೆಂಡತಿ ಜೊತೆಯಲ್ಲಿ ಕಲ್ಲುದೊಡ್ಡಿಯಲ್ಲಿ ವಾಸವಾಗಿರುತ್ತಾನೆ. ದಿನಾಂಕ 27-03-2013 ರಂದು ಪಿರ್ಯಾದಿಯ ಅಣ್ಣ ರವಿ ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಪಿರ್ಯಾದಿ ಮನೆಗೆ ಬಂದು ಮನೆಯ ಹಾಲಿನಲ್ಲಿ ಮರದ ಬೀರುವಿನಲ್ಲಿ ಇಟ್ಟದ್ದ ಪಿರ್ಯಾದಿ ಅಕ್ಕನ 4.5 ಗ್ರಾಂ ತೂಕದ ಬಂಗಾರದ ಓಲೆ, ಜುಮುಕಿ ಹಾಗೂ ಪಿರ್ಯಾದಿಯ 4 ಗ್ರಾಂ ತೂಕದ ಒಂದು ಬಿಳಿ ಹರಳಿನ ಉಂಗುರ ಇವುಗಳನ್ನು  ರವಿ ಎಂಬುವನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ. ಇವುಗಳ ಬೆಲೆ ಸುಮಾರು 25,000 ರೂ.ಗಳಾಗಿರುತ್ತೆ. ಕಳ್ಳತನ ಮಾಡಿಕೊಂಡು ಹೋಗಿರುವ ರವಿಯ ಮೇಲೆ ಕೇಸು ದಾಖಲಿಸಿ ನಮ್ಮ ಬಂಗಾರದ ವಸ್ತುಗಳನ್ನು ಪತ್ತೆ ಮಾಡಿ ಕೊಡಬೇಕಾಗಿ ಎಂದು ದೂರು ನೀಡಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
ಮನುಷ್ಯ ಕಾಣೆ
ಬಣಕಲ್‌ ಪೊಲೀಸ್ ಠಾಣೆ ಮೊ.ಸಂ- 52/2013 ಕಲಂ ಮನುಷ್ಯ ಕಾಣೆ‌‌ದಿನಾಂಕ 28/03/2013 ರಂದು ಪಿರ್ಯಾದಿ ಅಂತೋಣಿ ಪಲ್ಗುಣಿ ಗ್ರಾಮ ಇವರ ಮಗನಾದ ಅರೋನ್ ಡಿ ಕುನಾ 27 ವರ್ಷ ಈತನು ಯಾವುದೋ ವಿಚಾರವಾಗಿಮನಸ್ಸಿಗೆ ಬೇಜಾರುಮಾಡಿಕೊಂಡು ಮನೆಯನ್ನು ಬಿಟ್ಟು ಹೋಗಿ ಕಾಣೆಯಾಗಿರುತ್ತಾನೆ.ಪತ್ತೆಮಾಡಿಕೊಡಬೇಕಾಗಿ ಕೋರಿಕೆ.
ಹುಡುಗಿ ಕಾಣೆ
ಶೃಂಗೇರಿ ಪೊಲೀಸ್ ಠಾಣೆ ಮೊ.ಸಂ- 28/2013 ಕಲಂ ಹುಡುಗಿ ಕಾಣೆ‌‌ಫಿರ್ಯಾದುದಾರರಾದ ಅನಂತಚಾರ್‌ ಗಂಡಗಟ್ಟ ಗ್ರಾಮ ಇವರ ಸಂಬಂದಿಕರಾದ ಬಾಸ್ಕರ ಮತ್ತು ಭವಾನಿಯವರ ಜೊತೆಯಲ್ಲಿ ಶಿವಮೊಗ್ಗ ವಾಸಿಯಾದ ಪ್ರಶಾಂತ ಎಂಬುವವರು ನಮ್ಮ ಮನೆಗೆ ಬಂದು ನನ್ನ ಮಗಳಾದ ಶಿಲ್ಪ 22 ವರ್ಷ, ಇವಳನ್ನು ಪ್ರಶಾಂತನ  ತಮ್ಮ ಪ್ರೀತಿಸುತ್ತಿದ್ದು, ಈ ವಿಚಾರವು ತನ್ನ ತಂದೆ ತಾಯಿಯವರಿಗೆ ಒಪ್ಪಿಗೆ ಇಲ್ಲಾ ನಿಮಗೆ ಗೊತ್ತೆ ಎಂದು ಕೇಳಿದರು. ನಾನು ಇಲ್ಲಾ ಎಂದು ಹೇಳಿದೆ. ಈ ವಿಚಾರವನ್ನು ನನ್ನ ಮಗಳಿಗೂ ಸಹ ಹೇಳಿ ಅವರು ವಾಪಸ್ ಹೋದರು. ನನ್ನ ಮಗಳು  ಗುಬ್ಬುಗೋಡಿನಲ್ಲಿರುವ ನನ್ನ ವಾಸದ ಮನೆಯಲ್ಲಿಯೇ ಉತ್ತರ ಪತ್ರಿಕೆಯನ್ನು ಮೌಲ್ಯ ಮಾಪನ ಮಾಡುತ್ತಿದ್ದು,  ನಾನು ಒಳಗೆ ಹೋಗಿ ಊಟ ಮಾಡಿ ರಾತ್ರಿ 09.00ಗಂಟೆಗೆ ಬಂದು ನೋಡುವಷ್ಟರಲ್ಲಿ ನನ್ನ ಮಗಳು ಇರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ.
ಅಪಹರಣ ಪ್ರಕರಣ
ಶೃಂಗೇರಿ ಪೊಲೀಸ್ ಠಾಣೆ ಮೊ.ಸಂ- 27/2013 ಕಲಂ 363 ಐಪಿಸಿ ‌‌ದಿನಾಂಕ 28/03/2013 ರಂದು ಪಿರ್ಯಾದುದಾರರಾದ ರತ್ನಾಕರ ತೋಟದೂರು ವಾಸಿ ಇವರ 17 ವರ್ಷದ ಮಗಳು ವಿಧ್ಯಾಭ್ಯಾಸಕ್ಕೆಂದು ಶೃಂಗೇರಿ ಸಮೀಪ ಹಂದಿಗುಳಿ ವಾಸಿ ರಾಮಕೃಷ್ಣಯ್ಯ, ಎಂಬುವವರು ಮನೆಯಲ್ಲಿ ಬಿಟ್ಟಿದ್ದು, ಈಕೆಯು ಸರ್ಕಾರಿ  ಪದವಿ ಪೂರ್ವ ಕಾಲೇಜಿನಲ್ಲಿ ಅಂತಿಮ ಪರೀಕ್ಷೆ ಬರೆಯಲು ಹೋದವಳು ಮನೆಗೆ ಬಂದಿರುವುದಿಲ್ಲ. ನಂತರ ದಿ:-28/03/2013 ರಂದು ರಾತ್ರಿ  ಸುಮಾರು 08.00 ರಿಂದ 09.00 ಗಂಟೆಯ ಒಳಗೆ ಮತ್ತು ದಿ:-29/03/2013 ರಂದು ಬೆಳಗ್ಗೆ 07.30 ಕ್ಕೆ ಮೊಬೈಲ್ ನಂ. 8095551086 ನಿಂದ ನನ್ನ ಮೊಬೈಲ್ ನಂ 9449921806 ಕ್ಕೆ ಒಬ್ಬ  ವ್ಯಕ್ತಿ ಕರೆ ಮಾಡಿ ನನ್ನ ಹೆಸರು ಚೇತನ್ ಪಟೇಲ್ ಬೆಳಗಾಂ ವಾಸಿ ಎಂದು ತಿಳಿಸಿ ನಿನ್ನ ಮಗಳನ್ನು ನನಗೆ ಮದುವೆ ಮಾಡಿಕೊಡಲು ಹೇಳಿದ್ದರೂ ಮದುವೆ ಮಾಡಿಕೊಟ್ಟಿರುವುದಿಲ್ಲ. ಆದ್ದರಿಂದ ನಿನ್ನ ಮಗಳನ್ನು ನಿನ್ನೆ ದಿನ ಪರೀಕ್ಷೆ ಮುಗಿದ ನಂತರ ಕರೆದುಕೊಂಡು ಹೋಗಿದ್ದೇನೆ. ಎಂದು ಹೇಳಿರುತ್ತಾನೆ. ಆದ್ದರಿಂದ ನನ್ನ ಮಗಳು ಅಪ್ರಾಪ್ತಳಾಗಿದ್ದು, ಅವಳನ್ನು  ಅಪಹರಿಸಿಕೊಂಡು ಹೋದ ಚೇತನ್ ಪಟೇಲ್ ಮೇಲೆ ಕಾನೂನು  ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇನೆ

Thursday, March 28, 2013

Daily Crimes Report Dated:27/03/2013

ಬ್ಯಾಂಕ್‌ ಸಾಲ ತೀರಿಸಲಾಗದೆ ಆತ್ಮಹತ್ಯೆ
ಕಡೂರು ಪೊಲೀಸ್ ಠಾಣೆ ಯುಡಿಆರ್‌ ಸಂ- 11/2013 ಕಲಂ 174 ಸಿಆರ್‌ಪಿಸಿ‌‌ಪಿರ್ಯಾದುದಾರರಾದ ಚರಣ್‌ ಕಾರೇಹಳ್ಳಿ ವಾಸಿ ಇವರ ತಂದೆ ಗಂಗಾಧರಪ್ಪ ರವರಿಗೆ ಸುಮಾರು 10ಎಕರೆ ಜಮೀನು ಇದ್ದು. ಜಮೀನು ಅಭಿವೃದ್ದಿಗಾಗಿ ಕೊಳವೆ ಬಾವಿ ಕೊರೆಸಿ ಅದರಲ್ಲಿ ನೀರು ಬತ್ತಿ ಹೋಗಿರುತ್ತದೆ.ತೆಂಗು ತೋಟ ಹಾಳಾಗಿರುತ್ತದೆ. ಜಮೀನು ಅಭಿವೃದ್ದಿಗಾಗಿ ವಿಜಯಾ ಬ್ಯಾಂಕ್ ದೇವನೂರು.ಮತ್ತು ಮ್ಯಾಗ್ಮೋ ಪೈನಾನ್ಸ್ ಶಿವಮೊಗ್ಗ ಇಲ್ಲಿಂದ  ಟ್ರಾಕ್ಟರ್ ಖರೀದಿಸಲು ಸಾಲ ಮಾಡಿದ್ದು.  ಜಮೀನಿನಲ್ಲಿ ಯಾವುದೇ  ಬೆಳೆ ಉತ್ಪತ್ತಿಯಾಗದೆ ಹಣ ಸಿಗದೆ  ಬ್ಯಾಂಕ್ ಗೆ ಮತ್ತು ಫೈನಾನ್ಸ್ ಗೆ ಸಾಲ ತೀರಿಸಲಾಗಿರಲಿಲ್ಲ.ಬ್ಯಾಂಕ್‌ನವರು ಸಾಲ ಮರುಪಾವತಿಸುವಂತೆ ಸೂಚಿಸಿದ್ದು.  ಆದ್ದರಿಂದ ಪಿರ್ಯಾದಿಯ ತಂದೆ ಗಂಗಾಧರಪ್ಪ  ಬ್ಯಾಂಕ್ ಮತ್ತು  ಫೈನಾನ್ಸ್ ಸಾಲ ಹೇಗೆ ತೀರಿಸುವುದು ಎಂದು  ಯೋಚನೆ ಮಾಡಿ ಬೇಜಾರು ಮಾಡಿಕೊಂಡಿರುತ್ತಿದ್ದರು. ಅದನ್ನೆ ಮನಸ್ಸಿನಲ್ಲಿಟ್ಟುಕೊಂಡು  ದಿನಾಂಕ 27/03/2013 ರಂದು ತೋಟಕ್ಕೆ ಹೋಗಿ ಯಾವುದೋ ವಿಷ ಸೇವನೆ ಮಾಡಿದ್ದವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಾಗ ಬಾಬಾ ಎಸ್ಟೇಟ್  ಹತ್ತಿರ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾರೆ.

Wednesday, March 27, 2013

Daily Crimes Report Dated:26/03/2013

ಮನುಷ್ಯ ಕಾಣೆ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 52/2013 ಕಲಂ ಮನುಷ್ಯ ಕಾಣೆ‌‌ದಿನಾಂಕ 28/01/2013 ರಂದು ಪಿರ್ಯಾದುದಾರರಾದ ರಂಗಪ್ಪ ಕೋಡಿಹಳ್ಳಿ ವಾಸಿ ಇವರ ಮಗ 16 ವರ್ಷ ಪ್ರಾಯದ ಗಿರೀಶ್ ರವರು ಸ್ವಲ್ಪ ಮಾನಸಿಕ ಅಸ್ವಸ್ಥನಾಗಿದ್ದು ಇವನನ್ನು ಶಿವಮೊಗ್ಗದ ಅಶೋಕ ಪೈ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಪಡೆದು ಗುಣವಾಗಿದ್ದು ದಿನಾಂಕ:-28-01-2013 ರಂದು ಠಾಣಾ ಸರಹದ್ದಿನ ಜೋಡಿಕೊಡಿಹಳ್ಳಿ ಗ್ರಾಮದಲ್ಲಿ ತಮ್ಮ ಮನೆಯಲ್ಲಿ ಅವರ ತಾಯಿಗೆ ಹೊಲಕ್ಕೆ ಹೋಗಿಬರುತ್ತೇನೆ ಎಂದು ಹೇಳಿ ಹೋಗಿದ್ದು ವಾಪಸ್ಸು ಮನೆಗೆ ಬಂದಿರುವುದಿಲ್ಲಾ ಗಿರೀಶನನ್ನು ಎಲ್ಲಾ ಕಡೆ ಹುಡುಗಿದ್ದು ಸಿಕ್ಕಿರುವುದಿಲ್ಲಾ.
ಮೋಟಾರ್‌ ಸೈಕಲ್‌ ಕಳುವು
ಬೀರೂರು ಪೊಲೀಸ್ ಠಾಣೆ ಮೊ.ಸಂ- 27/2013 ಕಲಂ 379 ಐಪಿಸಿ‌‌ದಿನಾಂಕ 25/01/2013 ರಂದು ರಾತ್ರಿ ವೇಳೆಯಲ್ಲಿ ಚಟ್ಟನಹಳ್ಳಿ ಗ್ರಾಮದಿಂದ ಪಿರ್ಯಾದುದಾರರಾದ ತಿಮ್ಮಪ್ಪ ಇವರಮೋಟಾರ್ ಬೈಕನ್ನು ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿಕೊಂಡು ಮಲಗಿದ್ದು ಮರು ದಿವಸ ಬೆಳಿಗ್ಗೆ ಮೋಟಾರ್ ಬೈಕನ್ನು ನೋಡಿದ್ದು ಬೈಕ್  ಕಾಣಲಿಲ್ಲ ಅಕ್ಕಪಕ್ಕದಲ್ಲಿ ಹುಡುಕಾಡಿದ್ದು ಎಲ್ಲಿಯೂ ಸಿಗಲಿಲ್ಲ ಆಗ ಮೊಟಾರ್ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡುಹೋಗಿರುವುದು ಕಾತ್ರಿಯಾಯಿತು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಮೋಟಾರ್ ಬೈಕಿನ ಅಂದಾಜು ಬೆಲೆ 25,000-00 ರೂಗಳಾಗಿದ್ದು ಪತ್ತೆಮಾಡಿಕೊಡಬೇಕಾಗಿ ಕೋರಿಕೆ.

Tuesday, March 26, 2013

Daily Crimes Report Dated:25/03/2013

ಜೂಜಾಟ ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ- 36/2013 ಕಲಂ 87 ಕೆಪಿ.ಆಕ್ಟ್‌‌‌ದಿನಾಂಕ 25/03/2013 ರಂದು 1745 ಗಂಟೆಗೆ ಯಾರೋ ನಾಲ್ಕುಜನ  ಆಸಾಮಿಗಳು ಬಸವನಹಳ್ಳಿ ಕೆರೆಯ  ನಡುಗಡ್ಡೆಯಲ್ಲಿ  ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾರೆ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಪಿಎಸ್‌‌ಐ ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸಂಜೆ 5-45  ಗಂಟೆಯ ಸಮಯಕ್ಕೆ  ಸ್ಥಳಕ್ಕೆ ಹೋಗಿ ನೋಡಲಾಗಿ  ಆರೋಪಿಗಳಾದ ಹರೀಶ ಹಾಗೂ ಇತರೆ 4 ಜನರು ಯಾವುದೇ ಪರವಾನಗಿ ಇಲ್ಲದೇ  ಅಂದರ್ ಬಾಹರ್ ಇಸ್ಪೀಟ್ ಜೂಜಾಟ  ಆಡುತ್ತಿದ್ದುದು ಕಂಡು ಬಂದಿದ್ದು  ಸ್ಥಳದಲ್ಲಿ ದೊರೆತ 2050/- ನಗದು ಹಣ, 52 ಇಸ್ಪೀಟ್ ಎಲೆಗಳು,  4 ಮೊಬೈಲ್  ಸೆಟ್ ಗಳು ಮತ್ತು ಒಂದು  ಪ್ಲಾಸ್ಟೀಕ್ ಚೀಲವನ್ನು  ಅಮಾನತ್ತುಪಡಿಸಿಕೊಂಡಿರುತ್ತೆ.

ಮೋಟಾರ್‌ ಸೈಕಲ್‌ ಕಳುವು
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 111/2013 ಕಲಂ 379 ಐಪಿಸಿ‌‌– ದಿನಾಂಕ 04/03/2013 ರಂದು ಎಐಟಿ ಕಾಲೇಜು ಕ್ಯಾಂಪಸ್ ನಲ್ಲಿ ನಿಲ್ಲಿಸಿದ್ದ  ಪಿರ್ಯಾದುದಾರರಾದ ಸನ್ನಿಸ್ಯಾಂಡರ್‌‌ ಬಾಬ್ತು ಕೆಎ-18ಆರ್-3416 ರ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಅನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಸದರಿ ಮೋಟಾರ್ ಸೈಕಲ್ ಅಂದಾಜು ಬೆಲೆ  ಸುಮಾರು 45,000/- ರೂಗಳಾಗಬಹುದು.  
ಮನುಷ್ಯ ಕಾಣೆ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 112/2013 ಕಲಂ ಮನುಷ್ಯ ಕಾಣೆ‌‌ಪಿರ್ಯಾದುದಾರರಾದ ಶ್ರೀನಿವಾಸ ಬೆಣ್ಣಿನಮನೆ ಇವರ ತಂಗಿ ಮಮತಾ ರವರ ಮನೆಯಿಂದ ಪಿರ್ಯಾದುದಾರರ ತಂದೆ ಜಯರಾಮೇಗೌಡ ಪ್ರಾಯ 70 ವರ್ಷ, ಇವರು  ಹೊರಗಡೆ ತಿರುಗಾಡಲು ಹೋದವರು ವಾಪಸ್ ಮನೆಗೆ ಬಾರದೇ ಯಾರಿಗೂ ಹೇಳದೇ ಕೇಳದೆ  ಹೋಗಿ ಕಾಣೆಯಾಗಿರುತ್ತಾರೆ.ಸದರಿ ಕಾಣೆಯಾದ ಜಯರಾಮೇಗೌಡ ರವರ ಚಹರೆ ಸಾಧಾರಣಾ ಶರೀರ,  ಕೋಲುಮುಖ,, 5.3 ಡಿ ಎತ್ತರ.  ಕನ್ನಡ ಭಾಷೆ ಮಾತನಾಡುತ್ತಾರೆ.   ಕಪ್ಪು ಬಿಳಿ ಗೆರೆಗಳುಳ್ಳ ತುಂಬು ತೋಳಿನ ಟೆರಿಕಾಟ್ ಶರ್ಟ್‌,  ಪಟ್ಟಾಪಟ್ಟಿ ಶರ್ಟ್‌ ಧರಿಸಿರುತ್ತಾರೆ.
ಅಪಘಾತದಲ್ಲಿ ಸಾವು
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 113/2013 ಕಲಂ 279 304(ಎ) ಐಪಿಸಿ‌‌ ಮತ್ತು 187 ಐಎಂವಿ ಆಕ್ಟ್‌   ಕೆಎ-18. ಕ್ಯೂ- 1366 ರ ಮೋಟಾರ್ ಸೈಕಲ್  ಹಿಂಬದಿಯಲ್ಲಿ ಪಿರ್ಯಾದುದಾರರಾದ ಜಗದೀಶ್‌ ಶಂಕರಪುರ ವಾಸಿ ಇವರ ಸಂಬಂದಿ ಎ.ಜಿ. ಪರಮೇಶ್‌ ರವರು ಕುಳಿತುಕೊಂಡು ಚಿಕ್ಕಮಗಳೂರು ಬೇಲೂರು ರಸ್ತೆಯ ವಾಸವಿ ಕಾಫಿ ಕ್ಯೂರಿಂಗ್‌ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಯಾವುದೋ ಒಂದು ಮೋಟಾರ್ ಸೈಕಲ್ ಏಕಾಏಕಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ಎ.ಜಿ. ಪರಮೇಶ್ ರವರು ಹೋಗುತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಎ.ಜಿ. ಪರಮೇಶ್. 32 ವರ್ಷ. ರವರು ಕೆಳಗೆ ಬಿದ್ದು ತಲೆಯ ಹಿಂಬಾಗಕ್ಕೆ ಪೆಟ್ಟುಬಿದ್ದಿರುತ್ತೆ. ಆರೋಪಿತನು ತನ್ನ ಮೋಟಾರ್ ಸೈಕಲ್ ನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಎ.ಜಿ. ಪರಮೇಶ್ ರವರನ್ನು  ಚಿಕಿತ್ಸೆಯ ಬಗ್ಗೆ ಚಿಕ್ಕಮಗಳೂರು ಎಂ.ಜಿ. ಆಸ್ಪತ್ರೆಗೆ ದಾಖಲು ಮಾಡಿದ್ದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮೈಸೂರಿನ ಬಾನವಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿರುತ್ತಾರೆ.

Monday, March 25, 2013

Daily Crimes Report Dated:24/03/2013

ಕಳ್ಳತನದ ಮೋಟಾರ್‌ ಸೈಕಲ್‌ ವಶ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 51/2013 ಕಲಂ  41 ಕ್ಲಾಸ್‌(ಡಿ) ಸಿಆರ್‌ಪಿಸಿ ಜೊತೆಗೆ 379 ಐಪಿಸಿ‌‌ದಿನಾಂಕ 24/03/2013ರಂದು 1420ಗಂಟೆಯಲ್ಲಿ ಪಿಎಸ್‌‌ಐ ರವರು ವಾಹನ ತಪಾಸಣೆಯಲ್ಲಿದ್ದಾಗ ತರೀಕೆರೆ ಪಟ್ಟಣದ ಕಡೆಯಿಂದ ಶಿವಮೊಗ್ಗದ ಕಡೆಗೆ ಒಬ್ಬ ಮೋಟಾರ್‌ಬೈಕ್‌ ಸವಾರನು ಬೈಕ್‌ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದು ಸದರಿ ಬೈಕ್‌ ಸವಾರನನ್ನು ಅಡ್ಡಗಟ್ಟಿ ನಿಲ್ಲಿಸಿ ಬೈಕಿನ ದಾಖಲಾತಿಗಳನ್ನು ಕೇಳಲಾಗಿ ತಬ್ಬಿಬ್ಬಾಗಿ ನುಡಿಯುತ್ತಾ ಬೈಕಿನಿಂದ ಇಳಿದು ವಾಹನವನ್ನು ಅಲ್ಲೇ ಬಿಟ್ಟು ಓಡಿಹೋಗಲು ಪ್ರಯತ್ನ ಪಟ್ಟವನನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಅವನ ಹೆಸರು ಎಂ.ಸ್ವಾಮಿ @ಸಾಮಿ ಬಿನ್ ಮಂಜಪ್ಪ,ಬೆಟ್ಟತಾವರೆಕೆರೆ ತೋಟದ ಮನೆ ಎಂದು ಬೆವರುತ್ತಾ ತಬ್ಬಿಬ್ಬಾಗಿ ನುಡಿಯುತ್ತಿದ್ದನ್ನು ನೋಡಿ ಈತನು ಈ ಹಿಂದೆ ನಮ್ಮ ಠಾಣೆಯಲ್ಲಿ ವರದಿಯಾಗಿರುವ ಬೈಕ್‌ ಕಳವು ಪ್ರಕರಣದಲ್ಲಿ ಬಾಗಿಯಾಗಿದ್ದರಿಂದ ಅತನ ಮೇಲೆ ಅನುಮಾನ ಬಂದು ಈತನನ್ನು ವಾಹನಕ್ಕೆ ಸಂಬಂದಿಸಿದಂತೆ ಕೇಳಲಾಗಿ ಈಗ್ಗೆ ಸುಮಾರು ಎರಡು-ಮೂರು ತಿಂಗಳ ಹಿಂದೆ ಬೆಂಗಳೂರು ನಗರದ ಕೆ.ಅರ್.ಪುರಂ ಬಾಗ್‌ಮನೆ ಟೆಕ್‌ಪಾರ್ಕ್‌‌ನಲ್ಲಿ ನಿಲ್ಲಿಸಿದ್ದ ನೀಲಿ ಗೆರೆ  ಸಿಕ್ಟರ್ ಹೊಂದಿರುವ ಕಪ್ಪು ಬಣ್ಣದ ಬಜಾಜ್‌ ಡಿಸ್ಕವರಿ ಬೈಕ್‌ನ್ನು ಕದ್ದು ತಂದು ನಮ್ಮ ಗ್ರಾಮಕ್ಕೆ ತಂದು ಇಂದು ಮಾರಾಟ ಮಾಡಲು ಶಿವಮೊಗ್ಗಕ್ಕೆ ಹೋಗುತ್ತಿರುತ್ತೇನೆಂದು ತಿಳಿಸಿದ್ದು ಸದರಿ ಬೈಕಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳು ನನ್ನ ಬಳಿ ಇಲ್ಲವೆಂದು ತಿಳಿಸಿದ ಮೇರೆಗೆ ಸ್ಥಳದಲ್ಲಿ ಪಂಚಾಯ್ತುದಾರರ ಸಮಕ್ಷಮ ಅರೋಪಿಯನ್ನು ವಶಕ್ಕೆ ಪಡೆದುಕೊಂಡು ಸದರಿ ವಾಹನದ ನೊಂದಣಿ ಸಂಖ್ಯೆಯನ್ನು ನೋಡಲಾಗಿ ನೊಂದಣಿ ಸಂಖ್ಯೆ ಇರದೇ ಇದ್ದು ಬೈಕಿನ ಎಂಜಿನ್ ನಂಬರ್ JZMBUL55619 ಮತ್ತು ಚಾರ್ಸಿಸ್ ನಂಬರ್ MD2DSJZZZUWL11566  ಆಗಿರುತ್ತೆ. ಅದರ ಮೌಲ್ಯ 35000/- ರೂ ಆಗಿರುತ್ತೆ.
ಅಪಘಾತದಲ್ಲಿ ಸಾವು
ಬಣಕಲ್‌‌ ಪೊಲೀಸ್ ಠಾಣೆ ಮೊ.ಸಂ- 46/2013 ಕಲಂ  279 304(ಎ) ಐಪಿಸಿ & 134 ಎ & ಬಿ ಐಎಂವಿ ಆಕ್ಟ್‌‌‌ದಿನಾಂಕ 25/03/2013 ರಂದು ಬೆಳಗಿನ ಜಾವ 0230 ಗಂಟೆಯಲ್ಲಿ ಟಿ.ಜೆ.ಗಂಗಾಧರ ಎಂಬುವವರು ಬಣಕಲ್ ಪೇಟೆಯಲ್ಲಿರುವ ಫಿರ್ಯಾದಿ ಮಹೇಶ ಇವರ ಸಂಭ್ರಮ್ ಬಾರ್ ನ್ನು ಗಂಗಾಧರನು ಬಾಗಿಲು ಮುಚ್ಚಿಕೊಂಡು ಕೊಟ್ಟಿಗೆಹಾರಕ್ಕೆ ಬಣಕಲ್ ನಿಂದ ಹೋಗಲು ಬಣಕಲ್ ಪೇಟೆಯ ಹೊಸ ಪೆಟ್ರೋಲ್ ಬಂಕ್ ನ ಸಮೀಪ ರಸ್ತೆ ಪಕ್ಕದಲ್ಲಿ ನಿಂತಿದ್ದ ಆಟೋ ರಿಕ್ಷಾ ಕೆಎ-18-ಎ-1286 ಆಟೋದಲ್ಲಿ ಕುಳಿತಿದ್ದು ಅಷ್ಟರಲ್ಲಿ ಬಣಕಲ್ ನಿಂದ ಮಂಗಳೂರು ಕಡೆಗೆ ಹೋಗುವ ಯಾವುದೋ ವಾಹನ ಸದರಿ ಆಟೋಗೆ ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ಚಾಲಕನು ಆಟೋಗೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಆಟೋ ರಿಕ್ಷಾ ಜಖಂಗೊಂಡು ಆಟೋರಿಕ್ಷಾದಲ್ಲಿ ಪ್ರಯಾಣಿಸಲು ಕುಳಿತಿದ್ದ ಗಂಗಾಧರನ ತಲೆಗೆ ತೀವ್ರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.ಆಟೋ ರಿಕ್ಷಾಗೆ ಯಾವುದೋ ವಾಹನ ಅಪಘಾತ ವೆಸಗುವ ಸಮಯದಲ್ಲಿ ಆಟೋ ಚಾಲಕನು ಮಲ ಮೂತ್ರ ವಿಸರ್ಜನೆಗೆ ಹೋಗಿದ್ದರಿಂದ ಆಟೋ ಚಾಲಕನಿಗೆ ಯಾವುದೇ ಹಾನಿ ಸಂಭವಿಸಿರುವುದಿಲ್ಲ.ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ಗಂಗಾಧರನು ಮೃತಪಟ್ಟಿದ್ದನು. ಆಟೋ ಜಖಂಗೊಂಡಿತ್ತು.

Sunday, March 24, 2013

Daily Crimes Report Dated:23/03/2013

ಕಳುವು ಪ್ರಕರಣ
ಕೊಪ್ಪ ಪೊಲೀಸ್ ಠಾಣೆ ಮೊ.ಸಂ- 40/2013 ಕಲಂ 379 ಐಪಿಸಿ‌‌– ದಿನಾಂಕ 23/03/2013 ರಂದು ಪಿರ್ಯಾದಿ  ಶೇಖರಪ್ಪ ಬಿನ್ ಪತ್ಯಪ್ಪ ಮುಖ್ಯೋಪ್ಯಾದ್ಯಾಯರು ತ್ಯಾಗರಾಜ ರಸ್ತೆ ಕೊಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ಪಿರ್ಯಾದುದಾರರು ಕೊಪ್ಪ ತಾಲ್ಲೂಕು ಹುಲುಮಕ್ಕಿಯ ವೆಂಕಟೇಶ್ವರ ಬಡಾವಣೆಯಲ್ಲಿ ಸೈಟ್ ನಂ 8ರಲ್ಲಿ ಹೊಸದಾಗಿ ವಾಸದ ಮನೆಯನ್ನು ನಿರ್ಮಾಣ ಮಾಡುತಿದ್ದು ಸದರಿ ಖಾಲಿ ಜಾಗದಲ್ಲಿ ಒಂದು ರಿಂಗ್ ಬಾವಿ ತೆಗೆಸಿದ್ದು ಅದಕ್ಕೆ 0. 75  ಇಂಚಿನ ಸಬ್  ಮರ್ಸಿಬಲ್ ಮೋಟಾರ್ ಪಂಪ್ ಸೆಟ್ ಅನ್ನು ಅಳವಡಿಸಿದ್ದು ಅದನ್ನು ದಿನಾಂಕ 19/03/2013ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅದರ ಅಂದಾಜು ಬೆಲೆ ಸುಮಾರು 5200/- ರೂಗಳಾಗಿರುತ್ತದೆ.
ಸ್ಪೋಟಕ ಕಾಯ್ದೆಯಡಿ ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 110/2013 ಕಲಂ - 1884KARNATAKA MINOR MINERAL CONSISTENT RULE 1994 (U/s-43,44); EXPLOSIVE ACT, 1884 (U/s-9B(1)(b)); EXPLOSIVES ACT, 1884 (U/s-5)ಮರ್ಲೆ ಗ್ರಾಮದ ಸರ್ವೇ ನಂಭರ್ 134 ರಲ್ಲಿ ಕಲ್ಲುಗಣಿಗಾರಿಕೆ ಪರವಾನಗಿ ಪಡೆಯದೇ ಅನಧಿಕೃತವಾಗಿ  ಸ್ಪೋಟಕಗಳನ್ನು ಬಳಸಿ ಕಲ್ಲುಗಣಿಗಾರಿಕೆ ನಡೆಸಿದ್ದಾರೆಂಬ ಮಾಹಿತಿಯಂತೆ ಪಿರ್ಯಾದುದಾರರಾದ ಡಾ: ಎಂ.ಜೆ. ಮಹೇಶ್, ಭೂ ವಿಜ್ಞಾನಿ ಇವರು   ದಿನಾಂಕ:22-03-2013 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿ ಆರೋಪಿಗಳಾದ ಕೋಟೆ ಅನಿಲ್‌ಕುಮಾರ್‌ ಮತ್ತು ಇತರೆ 2 ಜನರು ಕಲ್ಲುಗಣಿಗಾರಿಕೆಗೆ ಕಲ್ಲುಗಣಿ ಗುತ್ತಿಗೆಗೆ ಮಂಜೂರಾತಿ  ಪಡೆದಿರುವ ಮರ್ಲೆ ಗ್ರಾಮದ ಸರ್ವೇ ನಂಬರ್ 134ರಲ್ಲಿ ಸ್ಪೋಟಕಗಳನ್ನು ಬಳಸಲು ಯಾವುದೇ ಪರವಾನಗಿ ಪಡೆಯದೇ  ಅನಧಿಕೃತವಾಗಿ ಕಲ್ಲುಗಣಿಗಾರಿಕೆಯಲ್ಲಿ  ಸ್ಪೋಟಕಗಳನ್ನು ಬಳಸಿ  ಕಲ್ಲುಗಣಿಗಾರಿಕೆ  ನಡೆಸಿ ಕಲ್ಲು ಗಣಿ ಗುತ್ತಿಗೆ ನಿಯಮವನ್ನು ಉಲ್ಲಂಘನೆ ಮಾಡಿರುತ್ಥಾರೆ.

Saturday, March 23, 2013

Daily Crimes Report dated:22/03/2013

ಮನುಷ್ಯ ಕಾಣೆ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 109/2013 ಕಲಂ ಮನುಷ್ಯ ಕಾಣೆ‌‌ ದಿನಾಂಕ 08/03/2013 ರಂದು ಪಿರ್ಯಾದುದಾರರಾದ ಶ್ರೀಮತಿ ಉಮಾವತಿ ತೇಗೂರು ವಾಸಿ ಇವರ ಗಂಡನಾದ ಮಂಜುನಾಥ 32 ವರ್ಷ  ರವರ ಚಹರೆ ಕೋಲುಮುಖ,5.5ಅಡಿ ಎತ್ತರ.ಗೋಧಿಮೈಬಣ್ಣ, ಬಲದೇ ಕೈ ತೋರು ಬೆರಳಿಗೆ ಬೆಳ್ಳಿ ಉಂಗುರ ಧರಿಸಿರುತ್ತಾರೆ.ಹಾಗೂ ಕಿರುಬೆರಳಿಗೆ ಎಂ ಎಂಬ ಅಕ್ಷರವಿರುವ ಚಿನ್ನದ ಉಂಗುರ ಧರಿಸಿರಿತ್ತಾರೆ.  ಕಾಣೆಯಾಗುವಾಗ  ಕ್ರೀಂ ಕಲರ್ ಟೀಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಇವರು ಮನೆಯಲ್ಲಿ ಜಗಳ ಮಾಡಿಕೊಂಡು ಹೋಗಿದ್ದು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.
ಅಪಹರಣ ಪ್ರಕರಣ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ- 47/2013 ಕಲಂ 366 (ಸಿ) ಐಪಿಸಿ - ‌‌ದಿನಾಂಕ 22/03/2013 ರಂದು ರಾತ್ರಿ0200ಗಂಟೆಯಲ್ಲಿ ಪಿರ್ಯಾದುದಾರರಾದ ರಮೇಶ ಹೊಸಳ್ಳಿ ಹಾಂದಿ ವಾಸಿ ಇವರ ಮನೆ ಹತ್ತಿರ C¤vÀPÀĪÀiÁgï ©£ï ¨Á§Ä EªÀ£ÀÄ ªÀÄvÀÄÛ EªÀ£À ¸ÉßûvÀgÀÄUÀ¼ÀÄ ªÀÄ£ÉAiÀÄ ºÀwÛgÀ N«Äß PÁgï C£ÀÄß vÀAzÀÄ £À£Àß ªÀÄUÀ¼ÀÄ ªÀģɬÄAzÀ ºÉÆgÀUÀqÉ §AzÁUÀ CªÀ¼À£ÀÄß §®vÁÌgÀªÁV N«ÄßPÁj£À°è PÀÆj¹PÉÆAqÀÄ C¥ÀºÀgÀtªÀiÁrPÉÆAqÀÄ ºÉÆÃVgÀÄvÁÛgÉ. D ¸ÀªÀÄAiÀÄzÀ°è £À£Àß ªÀÄUÀ¼ÀÄ EªÀgÀÄUÀ¼ÀÄ PÁj£À°è PÀgÉzÀÄPÉÆAqÀÄ ºÉÆÃUÀĪÁUÀ aÃgÁrzÀÄÝ PÉý¹ £ÁªÀÅ ªÀģɬÄAzÀ ºÉÆgÀUÀqÉ §AzÀÄ £ÉÆÃrzÁUÀ N«ÄßPÁgÀÄ ©½ §tÚzÀ PÁgÁVzÀÄÝ PÀvÀÛ¯ÁVzÀÝjAzÀ EzÀgÀ £ÀA§gï PÁt¹gÀĪÀÅ¢®è. £ÁªÀÅUÀ¼ÀÄ ºÉÆgÀUÉ §AzÀÄ PÀÆVPÉÆAqÀgÀÄ PÁgÀ£ÀÄß ¤°è¸ÀzÉà ªÉÃUÀªÁV PÁgÀ£ÀÄß ZÀ°¹PÉÆAqÀÄ §¸À̯ï PÀqÉUÉ ºÉÆÃVgÀÄvÁÛgÉ. ªÀÄUÀ¼À£ÀÄß C¥ÀºÀgÀt ªÀiÁrPÉÆAqÀÄ ºÉÆÃVgÀĪÀ C¤vïPÀĪÀiÁgï ©, ºÁUÀÆ EvÀgÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¹ £À£Àß ªÀÄUÀ¼À£ÀÄß ¥ÀvÉÛªÀiÁrPÉÆqÀ¨ÉÃPÁV EvÀå¢ü.

Friday, March 22, 2013

Daily Crimes Report Dated:21/03/2013

ಮಟ್ಕಾ ಜೂಜಾಟ ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 107/2013 ಕಲಂ 78 ಕ್ಲಾಸ್‌‌(3) ಕೆಪಿ ಆಕ್ಟ್‌‌‌ ದಿನಾಂಕ 21/03/2013 ರಂದು 1300ಗಂಟೆಯ ಸಮಯದಲ್ಲಿ ಕೈಮರದಲ್ಲಿ ಆರೋಪಿ ದುಗ್ಗಪ್ಪ ಈತನು ಮಟ್ಕಾ ಆಡಲು ಜನರನ್ನು ಕರೆಯುತ್ತಿದ್ದವನನ್ನು ಸುತ್ತವರೆದು  ಹಿಡಿದು  ಆತನು ಬರೆಯುತ್ತಿದ್ದ ಚೀಟ  ಹಾಗೂ ಜೂಜಾಟಕ್ಕೆ ಉಪಯೋಗಿಸಿದ 310/- ರೂ ಹಣವನ್ನು ಪಂಚರ ಸಮಕ್ಷಮ ಮಹಜರ್ ಮುಖಾಂತರ ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಸ್ವ ಪಿರ್ಯಾದು ಮೇರೆಗೆ ಕೇಸು ನೊಂದಾಯಿಸಿಕೊಂಡಿರುತ್ತೆ.
ಅಪಘಾತದಲ್ಲಿ ಸಾವು
ಬಣಕಲ್‌‌ ಪೊಲೀಸ್ ಠಾಣೆ ಮೊ.ಸಂ- 45/2013 ಕಲಂ 279 304(ಎ) ಐಪಿಸಿ ಜೊತೆಗೆ 134 (ಎ)(ಬಿ) ಐಎಂವಿ ಆಕ್ಟ್‌‌‌ ದಿನಾಂಕ 21/03/2013 ರಂದು 2030 ಗಂಟೆಯಲ್ಲಿ ಬಾನಳ್ಳಿ ಗ್ರಾಮದಲ್ಲಿ ಪಿರ್ಯಾದಿ ಶಿವಣ್ಣ ಇವರು ಮನೆಯ ಹತ್ತಿರ ಇದ್ದಾಗ ಕುಮಾರ ಮನೆಯ ಹತ್ತಿರ ಬಂದು ನಿಮ್ಮ ಮಗ ಸುನೀಲ್ ಗೆ ಬಾನಹಳ್ಳಿ ಕ್ರಾಸ್ ಹತ್ತಿರ ಟ್ರಾಕ್ಟರ್ ಡಿಕ್ಕಿ ಹೊಡಿಸಿದ್ದರಿಂದ ತಲೆಗೆ ತೀವ್ರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದನು. ಹೋಗಿ ನೋಡಲಾಗಿ ತನ್ನ ಮಗನ ತಲೆಗೆ ತೀವ್ರ ರಕ್ತಗಾಯವಾಗಿ ಮೃತಪಟ್ಟಿದ್ದನು. ಸ್ಥಳದಲ್ಲಿ ರಕ್ತವು ಹೆಪ್ಪುಗಟ್ಟಿ ಬಿದ್ದಿತ್ತು. ಸ್ಥಳದಲ್ಲಿ ಇದ್ದ ದಿನೇಶ, ದಿಲೀಪ ಮತ್ತು ಪುಟ್ಟಸ್ವಾಮಿ ರವರು ನನಗೆ ನಾವುಗಳು ಸುನೀಲ್ ನೊಂದಿಗೆ ಬಾನಹಳ್ಳಿ ಕ್ರಾಸ್ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಟ್ರಾಕ್ಟರ್ ನಂಬರ್ ಕೆಎ-18-ಟಿಎ-1737 ಟ್ರಾಕ್ಟರ್ ಟ್ರಾಲಿ ನಂಬರ್ ಕೆಎ-18-ಟಿಎ-1738ಟ್ರಾಕ್ಟರ್ ನ್ನು ಅದರ ಚಾಲಕ ಅತಿವೇಗವಾಗಿ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಬದಿ ನಡೆದುಕೊಂಡು ಹೋಗುತ್ತಿದ್ದ ನಮ್ಮಗಳ ಪೈಕಿ ಸುನೀಲ್ ಗೆ ಡಿಕ್ಕಿ ಹೊಡೆಸಿ ಅಪಘಾತವೆಸಗಿದ್ದರಿಂದ ಸುನೀಲ್ ನು ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು.ಸದರಿ ಟ್ರಾಕ್ಟರ್ ಚಾಲಕನು ಟ್ರಾಕ್ಟರ್ ನ್ನು ನಿಲ್ಲಿಸದೇ ಹೊಡೆದುಕೊಂಡು ಹೋಗಿದ್ದಾಗಿ ತಿಳಿಸಿದರು.
ಅಪಘಾತದಲ್ಲಿ ಸಾವು
ಅಜ್ಜಂಫುರ ಪೊಲೀಸ್ ಠಾಣೆ ಮೊ.ಸಂ- 46/2013 ಕಲಂ 279 304(ಎ) ಐಪಿಸಿ ‌‌ ದಿನಾಂಕ 21/03/2013 ರಂದು 1300 ಗಂಟೆಯಲ್ಲಿ ತಿಮ್ಲಾಪುರ ಗೇಟಿನ ಹತ್ತಿರ ಪಿರ್ಯಾದುದಾರರಾದ ಉಮಾಮಹೇಶ್ವರ ಇವರ ಅಣ್ಣನ ಮಗನಾದ ಸಿ.ಎಸ್. ಅರುಣಕುಮಾರ್ ಸಿ. ರೇಣುಕಪ್ಪ ರವರ ಟ್ರ್ಯಾಕ್ಟರ್ ನಂ ಕೆ.ಎ.18.ಟಿ.ಎ. 4231 ರಲ್ಲಿ ಕಬ್ಬಿಣದ ಸರಳುಗಳನ್ನು ತುಂಬಿ ಕೊಂಡು ತಿಮ್ಮಾಪುರ ಗೇಟಿನ ಹತ್ತಿರ ಅರೋಪಿ ಟ್ರ್ಯಾಕ್ಟರನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು  ಹೋಗಿದ್ದು  ಟ್ರ್ಯಲರ್  ಗೆ ಅಳವಡಿಸಿದ್ದ ಲಾಕ್ ಕಟ್ಟಾಗಿ  ಟ್ರ್ಯಲರ್ ಎಂಜಿನ ಗೆ ಬಡಿದಿದ್ದು ಎಂಜಿನ್ ಪಲ್ಟಿಯಾಗಿ ಎಂಜಿನ್ ನ ಚಾಲಕನ ಪಕ್ಕ ಕುಳಿತಿದ್ದ ಅರುಣಕುಮಾರ ಕೆಳಕ್ಕೆ ಬಿದ್ದಾಗ ಅತನ ಮೇಲೆ ಎಂಜಿನ್ ನ ಬಟನ್ ಟ್ಯೆರ್ ಮೇಲೆ ಬಿದ್ದಿದ್ದು ಅರುಣಕುಮಾರ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ.
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಕಳಸ ಪೊಲೀಸ್ ಠಾಣೆ ಮೊ.ಸಂ- 10/2013 ಕಲಂ 448 323 354 506 ಐಪಿಸಿ  ಜೊತೆಗೆ 3 ಕ್ಲಾಸ್‌‌(1)(11) ಎಸ್‌‌ಸಿಎಸ್‌ಟಿ ಆಕ್ಟ್‌‌ ‌‌ದಿನಾಂಕ 20/03/2013ರಂದು 1830ಗಂಟೆಯಲ್ಲಿ  ಪಿರ್ಯಾದುದಾರರಾದ ಗೀತಾ ತಲಗೋಡು ವಾಸಿ ಇವರು ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಪಿರ್ಯಾದುದಾರರ ಮನೆಗೆ ಬಂದ ರಾಜೇಂದ್ರ ಅವರ  ತಾಯಿಗೆ ಟಿ.ಟಿ. ಇಂಜೆಕ್ಷನ್ ನೀಡಿ ಕಳುಹಿಸಿ, ಸಿರಿಂಜನ್ನು ಶುಚಿಗೊಳಿಸುತ್ತಿರುವಾಗ ಒಬ್ಬ ಅಪರಿಚಿತ ವ್ಯಕ್ತಿ ಏಕಾ ಏಕಿ ಮನೆಯೊಳಗೆ ಪ್ರವೇಶಿಸಿ, ಹಿಡಿದು ಎಳೆದಾಡಿ, ತಬ್ಬಿಕೊಂಡು  ಮಂಚದ  ಮೇಲೆ ಎಳೆದುಕೊಂಡು ಹೋಗಿ ಕೆಡವಿಕೊಂಡು, ಕೂಗಾಡಿದರೆ ಸಾಯಿಸಿಬಿಡುತ್ತೇನೆ.  ಎಂದು ಹೆದರಿಸಿದನು ಆಗ ನಾನು ಜೋರಾಗಿ ಕಿರುಚಿಕೊಂಡ ನಂತರ, ಕೈಯಿಂದ ಹೊಡೆದು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿ ಏನು ಮಾಡಿಕೊಳ್ಳುತ್ತೀಯಾ ಎಂದು ಹೇಳಿ ಮನೆಯಿಂದ ಹೊರಟು ಹೋಗಿರುತ್ತಾನೆ.ಆರೋಪಿ ಹೆಸರು ತಿಳಿಯಲಾಗಿ ಚಿದಂಬರ ಎಂಬುದಾಗಿರುತ್ತೆ.
ಜೂಜಾಟ ಪ್ರಕರಣ
ಯಗಟಿ  ಪೊಲೀಸ್ ಠಾಣೆ ಮೊ.ಸಂ- 21/2013 ಕಲಂ 87 ಕೆ.ಪಿ.ಆಕ್ಟ್‌‌ ‌‌ದಿನಾಂಕ 21/03/2013 ರಂದು 1800 ಗಂಟೆಯಲ್ಲಿ ಪಿಎಸ್‌‌ಐ ರವರು ಠಾಣೆಯಲ್ಲಿದ್ದಾಗ ಹನುಮನಹಳ್ಳಿ ತೋಟದಲ್ಲಿ ಜೂಜಾಟ ಆಡಿತ್ತಿರುತ್ತಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚರ ಹಾಗೂ ಸಿಬ್ಬಂದಿಳು ಹನುಮನಹಳ್ಳಿ-ಮುಗಳಿಕಟ್ಟೆ ರಸ್ತೆಯ ಹತ್ತಿರ ಹೋಗಿ  ತೆಂಗಿನ ಮರದ ಕೆಳಗೆ ಅಂದರ್‌ ಬಾಹಾರ್‌ ಜೂಜಾಟ ಆಡುತ್ತಿದ್ದ ಒಟ್ಟು 5ಜನ ಅಸಾಮಿಗಳ ಪೈಕಿ 3ಜನ ಅಸಾಮಿಗಳನ್ನು ಹಿಡಿದುಕೊಂಡಿದ್ದು 2 ಜನ ಅಸಾಮಿಗಳು ಪರಾರಿಯಾಗಿದ್ದು  ಹಿಡಿದುಕೊಂಡಿದ್ದ  ಅಸಾಮಿಗಳ ಹೆಸರು ವಿಳಾಸಗಳನ್ನು ಕೇಳಲಾಗಿ 1] ಉಮೇಶ ಬಿನ್ ನಾಗಭೂಷಣ್‌ ಯಗಟಿ ಗ್ರಾಮ  2] ಕರಿಯಪ್ಪ ಬಿನ್ ಸಣ್ಣನಂಜಪ್ಪ ಹನುಮನಹಳ್ಳಿ ಗ್ರಾಮ 3]ತಿಪ್ಪೇಶ ಬಿನ್ ಮುಪ್ಪನಪ್ಪ ಮುಗಳಿಕಟ್ಟೆ ಗ್ರಾಮ ಎಂದು ತಿಳಿಸಿದ್ದು ಪರಾರಿಯಾದ ಅಸಾಮಿಗಳ ಹೆಸರು ವಿಳಾಸ ಕೇಳಲಾಗಿ ಬೈರ @ ಭೈರಪ್ಪ ಬಿನ್ ಚಂದ್ರಪ್ಪ  ಹನುಮನಹಳ್ಳಿ ಶೇಖರಪ್ಪ ವಾಟರ್‌ ಮ್ಯಾನ್‌ ಹನುಮನಹಳ್ಳಿ ಎಂದು ತಿಳಿದು ಬಂದಿದ್ದು.ಸದರಿ ಜೂಜಾಟ ಆಡಲು ಪರವಾನಿಗೆ ವಗೈರೆ ಕೇಳಲಾಗಿ ಇಲ್ಲವೆಂದು ತಿಳಿಸಿದ್ದು ನಂತರ ಆಕಾಡದಲ್ಲಿದ್ದ 520/- ಹಣವನ್ನು ಮತ್ತು 52 ಇಸ್ಪೀಟು ಎಲೆಗಳನ್ನು ಹಾಗೂ ಒಂದು ಪ್ಲಾಸ್ಟೀಕ್‌ ಚಾಪೆಯನ್ನು ಮಹಜರ್‌ ಮುಖೇನ ಅಮಾನತ್ತು ಪಡಿಸಿಕೊಂಡು  ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿರುವುದಾಗಿರುತ್ತೆ.