Tuesday, April 30, 2013

Daily Crimes Report Dated:29/04/2013

ಮಟ್ಕಾ ಜೂಜಾಟ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ- 78/2013 ಕಲಂ- 78 ಕ್ಲಾಸ್‌‌(3) ಕೆ.ಪಿ.ಆಕ್ಟ್‌– ದಿನಾಂಕ 29/04/2013 ರಂದು ಬಿಳಗುಳ ಬಳಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ 01-00 ರೂಪಾಯಿಗೆ 70-00 ರೂಪಾಯಿಯಂತೆ 10-00 ರೂಪಾಯಿಗೆ 700-00ರೂಪಾಯಿಗಳಂತೆ ಹಣವನ್ನು ಕೊಡುವುದಾಗಿ ಮಟ್ಕಾ ಜೂಜಾಟಕ್ಕೆ ಚೀಟಿಯನ್ನು ಬರೆಯುತ್ತಿದ್ದವನನ್ನು ಪಂಚರಸಮಕ್ಷಮ ವಶಕ್ಕೆ ಪಡೆದು ಮಹಜರ್ ನಡೆಸಿ ಮಟ್ಕಾ ಜೂಜಾಟಕ್ಕೆ ಉಪಯೋಗಿಸಿದ 660-00 ರೂಪಾಯಿ ನಗದು ಹಣ, montex ಎಂದು ಹೆಸರಿರುವ ಒಂದು ಪೆನ್ನು ಹಾಗು ಸಂಖ್ಯೆಗಳು ಇರುವ ಒಂದು ಬಿಳಿ ಹಾಳೆಯನ್ನು ಅಮಾನತ್ತು ಪಡಿಸಿಕೊಂಡು ಆರೋಪಿ ವೇಲು @ಅಣ್ಣಾಚಿ ಎಂಬುವನನ್ನು ದಸ್ತಗಿರಿ ಮಾಡಿರುತ್ತೆ.
ಅಪಘಾತದಲ್ಲಿ ಸಾವು
ಗೋಣಿಬೀಡು ಪೊಲೀಸ್ ಠಾಣೆ ಮೊ.ಸಂ- 63/2013 ಕಲಂ- 279 304(ಎ) ಐಪಿಸಿ- ದಿನಾಂಕ 29/04/2013 ರಂದು 1300 ಗಂಟೆಯಲ್ಲಿ ಬೇಲೂರು ಕಡೆಗೆ ಹೋಗುವ ಬಸ್ಸನ್ನು ಹತ್ತಲು  ಪಿರ್ಯಾದಿ ಅಣ್ಣಾಮಲೈ ಹೆಂಡತಿ ಚಂದ್ರ, ಮಕ್ಕಳಾದ ಅನು, ಭಾರತಿ ಯವರೊಂದಿಗೆ ರಸ್ತೆ ದಾಟುತ್ತಿರುವಾಗ  ಗೋಣಿಬೀಡು ಕಡೆಯಿಂದ ಬಂದ  ಕೆಎ-15,ಎನ್-7077 ರಜೀಪಿನ ಚಾಲಕ  ಜೀಪನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ಮಗಳಾದ ಅನು 5 ವರ್ಷ ಪ್ರಾಯ ಇವಳಿಗೆ ಡಿಕ್ಕಿ  ಹೊಡೆಸಿದರ ಪರಿಣಾಮ  ಅವಳ ತಲೆಗೆ  ತೀವ್ರ ತರಹದ ರಕ್ತಗಾಯವಾಗಿ  ರಸ್ತೆಯಲ್ಲಿ ಬಿದ್ದಳು, ನಂತರ ನನ್ನ ಮಗಳನ್ನು ಚಿಕಿತ್ಸೆಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ  ಸೇರಿಸಿದ್ದು ಪರಿಕ್ಷಿಸಿದ ವೈದ್ಯರು   ನನ್ನ ಮಗಳು ಮೃತಪಟ್ಟಿರುವುದಾಗಿ ತಿಳಿಸಿದರ. ಅಫಘಾತ ಮಾಡಿದ ಚಾಲಕನ ಹೆಸರ ವಿಳಾಸ ಕೇಳಲಾಗಿ ಲೋಕೇಶ, ವಾಸ ಉಜಿರೆ ಎಂಬುದಾಗಿ ತಿಳಿಸಿಯಿತು. ಅಪಘಾತ ಮಾಡಿ ಚಾಲಕನ ಮೇಲೆ ಕಾನೂನು ಕ್ರಮಕೈಗೊಳ್ಳಲು ಕೋರಿದ್ದಾಗಿರುತ್ತದೆ.
ಅಪಘಾತದಲ್ಲಿ ಸಾವು
ಲಿಂಗದಹಳ್ಳಿ ಪೊಲೀಸ್ ಠಾಣೆ ಮೊ.ಸಂ- 31/2013 ಕಲಂ- 279 304(ಎ) ಐಪಿಸಿ- ದಿನಾಂಕ 29/04/2013 ರಂದು 1415 ಗಂಟೆಯಲ್ಲಿ ಲೋಕೇಶ್ ರವರ ಶನಿದೇವರ ದೇವಾಸ್ಥಾನದ ಹತ್ತಿರ ವಿರುವ ಅಡಿಕೆ ತೋಟಕ್ಕೆ ಬೋರ್ ವಲ್ ಕೊರೆಸಲು ಈ ದಿವಸ ಕೆ.ಎ. ಕೆ.ಎ. 01 ಎಂ.ಕೆ. 275 ಬೋರ್ ವೆಲ್ ಲಾರಿಯನ್ನು ಕರೆಸಿದ್ದರು  . ಬೋರ್ ವೆಲ್ ಕೊರೆಯುತ್ತಿದ್ದರಿಂದ ಅದನ್ನು ನೋಡಲು ನಾನು ಮನು ಇತರರು ಹೋಗಿದ್ದೆವು, ಇದೆ ಲಾರಿಯನ್ನು ಕುಂಟಿನ ಮಡುವಿಗೆ ಕರೆದುಕೊಂಡು ಹೋಗಲು ನನ್ನ ಬಾವ ಈಶ್ವರಪ್ಪ ನವರು ಸಹ ಬೋರ್ ವೆಲ್ ಕೊರೆಯುತ್ತಿದ್ದ ತೋಟಕ್ಕೆ ಬಂದಿದ್ದರು.  ನಾವು ಗಳು ನೋಡುತ್ತಿದ್ದಾಗ  ಮದ್ಯಾಹ್ನ 2.15 ರ ಸಮಯದಲ್ಲಿ ಬೋರ್ ವೆಲ್ ಡ್ರಿಲ್ಲಿಂಗ್ ಮಿಷಿನ್ ಗೆ ಫಿಕ್ಸ್ ಮಾಡಿದ್ದ  ಸುಮಾರು 18 ಅಡಿ ಉದ್ದದ ರಾಡು ಲಾರಿಯ ಕೆಲಸಗಾರರ ಬೇಜಾವಬ್ದಾರಿ ತನದಿಂದ ರಾಡು ಕಳಚಿಕೊಂಡು ನನ್ನ ಬಾವ ಈಶ್ವರಪ್ಪ ಬಿನ್ ಮರುಳ ಸಿದ್ದಪ್ಪ 45 ವರ್ಷ ಇವರ ತಲೆಯ ಮೇಲೆ ಬಿದ್ದಿದ್ದರಿಂದ  ರಕ್ರ ಸ್ರಾವ ವಾಗಿದ್ದು ಅವರನ್ನು ಲಿಂಗದಹಳ್ಳಿಯ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ ಪಟ್ಟಿರುತ್ತಾರೆ.ಬೋರ್ ವೆಲ್ ಲಾರಿಯ ಡ್ರಿಲ್ಲಿಂಗ್ ಮಿಷನ್ ನ ರಾಡು ಲಾರಿ ಕೆಲಸಗಾರ ಸೆಂದಿಲ್ ರವರ ಬೇಜಾವಬ್ದಾರಿ ತನದಿಂದ  ಈಶ್ವರಪ್ಪನವರ ತಲೆಯ ಮೇಲೆ ಬಿದ್ದು  ಅವರು ಸಾವನಪ್ಪಿರುತ್ತಾರೆ. 

Monday, April 29, 2013

Daily Crimes Report Dated:28/04/2013

ಜೂಜಾಟ ಪ್ರಕರಣ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ- 104/2013 ಕಲಂ- 87 ಕೆ.ಪಿ.ಆಕ್ಟ್‌– ದಿನಾಂಕ 28/04/2013 ರಂದು 1700 ಗಂಟೆಯಲ್ಲಿ ಕೆಳಗೂರು ಗ್ರಾಮದ ದೇವಿರಮ್ಮನವರ ದೇವಸ್ಥಾನದ ಹತ್ತಿರ ಅಂದರ್ಬಾಹರ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಿಎಸ್‌‌ಐ ಮತ್ತು ಸಿಬ್ಬಂದಿ ಮತ್ತು ಪಂಚರೋಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಢಿ ಆರೋಪಿತರುಗಳಾದ ಪ್ರದೀಪ ಹಾಗೂ ಇತರೆ 3ಜನರನ್ನು ದಸ್ತಗಿರಿ ಮಾಡಿ  ಜೂಜಾಟಕ್ಕೆ ಉಪಯೋಗಿಸಿದ ಅಖಾಡದಲ್ಲಿದ್ದ ನಗದು 17200=00 ರೂ ಪ್ಲಾಸ್ಟಿಕ್ ಚೀಲವನ್ನು ಚೀಲದ ಮೇಲೆ ಬಿದ್ದಿದ್ದ 52 ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದುಕೊಂಡಿರುತ್ತೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ
ಅಜ್ಜಂಫುರ ಪೊಲೀಸ್ ಠಾಣೆ ಮೊ.ಸಂ- 97/2013 ಕಲಂ- 188 171(ಹೆಚ್‌‌) ಐಪಿಸಿ– ಪಿರ್ಯಾದಿಯವರು ಎಂಸಿಸಿ ಹಗಲು ತಂಡದಲ್ಲಿ ಸದಸ್ಯರಾದ ಶ್ರೀ ಚಂದ್ರಪ್ಪ, ರಾ||ನಿ||ಅಮೃತಾಪುರ, ಶ್ರೀಮೂರ್ತಿ. ಎ.ಎಸ್.ಐ. ತರೀಕೆರೆ ಪೊಲೀಸ್ ಠಾಣೆ,ಮತ್ತು ಕೆಎ-18ಜಿ-676ರ ಜೀಪು ಚಾಲಕ ಕಣ್ಣನ್ ರವರೊಂದಿಗೆ ಹುಣಸಘಟ್ಟ ಗ್ರಾಮದಲ್ಲಿ ಚುನಾವಣೆಯ ಸಂಭಂದ  ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನ ಪಕ್ಕದ ಸಿಮೆಂಟ್ ರಸ್ತೆಯಲ್ಲಿ ಚುನಾವಣಾಧಿಕಾರಿಗಳ ಯಾವುದೇ ಅನುಮತಿ ಪಡೆಯದೆ ಮಾರುತಿ ಓಮಿನಿ ಕಾರ್ ನಂ. ಕೆಎ-18ಎಂ.-9586ರ ಹಿಂಭಾಗದ ಗ್ಲಾಸ್ ನ ಮೇಲೆ ಕೆಜೆಪಿ ಗುರುತಿರುವ ಚೀಟಿಗಳನ್ನು  ಅಂಟಿಸಿದ್ದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ.ಆ ಕಾರಿನ ಚಾಲಕನ ಹೆಸರು ವಿಳಾಸ ವಿಚಾರ ಮಾಡಲಾಗಿ  ಹೆಸರು ವಿಳಾಸ ಗೊತ್ತಿರುವುದಿಲ್ಲ.
 ಅಪಘಾತದಲ್ಲಿ ಸಾವು
ಅಜ್ಜಂಫುರ ಪೊಲೀಸ್ ಠಾಣೆ ಮೊ.ಸಂ- 97/2013 ಕಲಂ- 188 171(ಹೆಚ್‌‌) ಐಪಿಸಿ– ಪಿರ್ಯಾದಿ ನಾಗರಾಜ್‌ ಇವರ ಅಣ್ಣನ ಮಗ ಯೋಗೀಶ ನು ಪಿರ್ಯಾದಿ ಮೊಬೈಲ್ ಗೆ ಕರೆ ಮಾಡಿ ನಾವು ವಾಸವಿರುವ ಗಾಂಧಿನಗರ ಎಮ್ಮೆ ದೊಡ್ಡಿ ರಸ್ತೆ ಕೆ.ಎಂ.ಕೆ.ಸಾಬ್ರು ರವರ ಜಮೀನಿನಲ್ಲಿ  ತಂದೆಯಾದ ಪರಮೇಶನು ಸತ್ತುಬಿದ್ದಿರುತ್ತಾನೆ ಬೇಗ ಬನ್ನಿ ಎಂದು ವಿಚಾರ ತಿಳಿಸಿದಾಗ ಪಿರ್ಯಾದಿ ಮತ್ತು ನೆಂಟರಿಷ್ಟರು ಸ್ಥಳಕ್ಕೆ ಬಂದು ನೋಡಲಾಗಿ ಪಿರ್ಯಾದಿ ಅಣ್ಣ ಪರಮೇಶನು ಸತ್ತು  ಅಂಗಾತವಾಗಿ ಮಲಗಿದ್ದಾಗಿರುತ್ತೆ.  ಈತನ  ಮುಖದ ಗದ್ದದಲ್ಲಿ ಹಣೆಯಲ್ಲಿ, ರಕ್ತಗಾಯವಾಗಿ ಮುಖ  ಪೂರ್ತಿ ಮತ್ತು ತಲೆ ಕೂದಲು ಮಣ್ಣಾಗಿದ್ದು, ಶವದ ಪಕ್ಕದಲ್ಲಿ ಒಂದು ದೊಡ್ಡಿ ಕಾಡು ಜಾತಿಯ ಕಲ್ಲು ಮತ್ತು ಮಣ್ಣಿನ ಎಂಟೆ ಬಿದ್ದಿರುತ್ತೆ. ಇವುಗಳಲ್ಲಿ ಯಾವುದೇ ರಕ್ತದ ಕಲೆ ಇರುವುದಿಲ್ಲ. ಶವದಿಂದ ಸುಮಾರು 15-20 ಅಡಿ ದೂರಕ್ಕೆ ಪಿರ್ಯಾದಿ ಅಣ್ಣ ಹಾಕಿಕೊಳ್ಳುತ್ತಿದ್ದ ಕಪ್ಪು ಬಣ್ಣದ ಪ್ಲಾಸ್ಟಿಕ್ ಶೂ ಗಳು ಮತ್ತು ಶೂ ಗಳ ನೇರಕ್ಕೆ ಎಳೆದು ತಂದಿರುವಂತಹ ಗುರುತು ಇರುತ್ತೆ. ಹಾಗೂ ಹೊಲದಿಂದ ಆಚೆ ಎಮ್ಮೆದೊಡ್ಡಿ ರಸ್ತೆಯ ಮಣ್ಣಿನ ರಸ್ತೆಯಲ್ಲಿ ಪಿರ್ಯಾದಿ ಅಣ್ಣನ ಟೆವಲ್‌ವೊಂದು ರಕ್ತವಾಗಿ ಬಿದ್ದಿರುತ್ತೆ. ಟೆವೆಲ್ ನಿಂದ ಸ್ವಲ್ಪ ದೂರದಲ್ಲಿ ರಕ್ತ ಬಿದ್ದಿರುವ ಕಲೆಗಳಿರುತ್ತೆ.  ವಿಚಾರ ತಿಳಿಯಲಾಗಿ ನಿನ್ನೆ ದಿನ ದಿ:27-04-2013 ರಂದು 22-00 ಗಂಟೆಯಲ್ಲಿ ಪಿರ್ಯಾದಿ ಅಣ್ಣ ಪರಮೇಶನು ದುರ್ಗಣ್ಣ ಎಂಬುವವರ ಚಿಲ್ಲರೆ ಅಂಗಡಿ ಹತ್ತಿರ ಇದ್ದವನನ್ನು ಸಿದ್ದಮ್ಮ ಮತ್ತು ಪದ್ದಮ್ಮ ಎಂಬುವವರು  ಮನೆಗೆ ಹೋಗು ಎಂದು ಕಳುಹಿಸಿದ್ದು,ಪರಮೇಶನು ಮನೆಯ ಕಡೆಗೆ ಎಮ್ಮೆದೊಡ್ಡಿ ಟಾರ್ ರಸ್ತೆಯಲ್ಲಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಯಾವುದೋ ವಾಹನ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಅಣ್ಣ ಪರಮೇಶನಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ್ದರ ಪರಿಣಾಮ  ಮೃತಪಟ್ಟಂತೆ ಸ್ಥಳದ ವಿದ್ಯಮಾನದಿಂದ ಕಂಡು ಬಂದಿರುತ್ತದೆ.ಅಪಘಾತವನ್ನುಂಟು ಮಾಡಿದ ವಾಹನ ಚಾಲಕನು ಸಾಕ್ಷಾಧಾರಗಳನ್ನು ನಾಶ ಮಾಡುವ ಉದ್ದೇಶದಿಂದ ಮೇಲ್ಕಂಡ ಹೊಲದ ಒಳಗೆ ಎಳೆದುಕೊಂಡು ಹೋಗಿ ಮಲಗಿಸಿ  ಪಕ್ಕದಲ್ಲಿ ಕಲ್ಲು-ಮಣ್ಣು ಹೆಂಟೆಗಳನ್ನು ಇಟ್ಟಿರುವುದು ಕಂಡು ಬಂದಿರುತ್ತೆ. ಇತ್ಯಾದಿ

Saturday, April 27, 2013

Daily Crimes Report Dated:26/04/2013

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 195/2013 ಕಲಂ- 171(ಇ) ಐಪಿಸಿ – ದಿನಾಂಕ 25-04-2013 ರಂದು 1-00ಗಂಟೆಯ ಸಮಯದಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಜಾಗರ ಹೋಬಳಿ ದೇವರಹಳ್ಳಿ ಗ್ರಾಮದಲ್ಲಿ ಆರೋಪಿ ಶ್ರೀಮತಿ ಮೀನಾ ರವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಗಿಸಿ  ಚುನಾವಣೆ ಸಂಬಂದ ಮತದಾರರಿಗೆ ಹಂಚಲು ಸೀರೆಗಳನ್ನು ಸಂಗ್ರಹಿಸಿದ್ದಾರೆಂಬ ಮಾಹಿತಿ ಮೇರೆಗೆ ಎಂ.ಸಿ.ಸಿ.ತಂಡದ ಮುಖ್ಯಸ್ಥರಾದ ಶ್ರೀ ಸಿಂಗಾರಿ ಗೌಡ ರವರು ದಾಳಿ ನೆಡೆಸಿ ವಿವಿಧ ಬಣ್ಣದ 12ಹೊಸ ಸೀರೆಗಳನ್ನು ವಶಪಡಿಸಿಕೊಂಡಿರುತ್ತಾರೆ. ಇವುಗಳ ಬೆಲೆ ಸುಮಾರು 1800-00 ರೂಗಳಾಗಿರುತ್ತೆ. ಎಂದು ಪಿರ್ಯಾದುದಾರರು ಹಾಜರುಪಡಿಸಿದ ಮೇರೆಗೆ ಠಾಣಾ ಎನ್.ಸಿ. ನಂ: 373/13 ರಲ್ಲಿ ನೊಂದಾಯಿಸಿಕೊಂಡು ಪ್ರಕರಣ ದಾಖಲಿಸುವ ಬಗ್ಗೆ ಘನ ನ್ಯಾಯಾಲಯದ ಅನುಮತಿ ಪಡೆದು ಪ್ರ.ವ.ವರದಿ ಸಲ್ಲಿಸಿದೆ.   

Friday, April 26, 2013

Daily Crimes Report Dated:25/04/2013

ಅಪಘಾತದಲ್ಲಿ ಸಾವು
ಕಡೂರು ಪೊಲೀಸ್ ಠಾಣೆ ಮೊ.ಸಂ- 119/2013 ಕಲಂ- 279 304(ಎ) ಐಪಿಸಿ – ದಿನಾಂಖ 25/04/2013 ರಂದು ಮತ್ತುಘಟ್ಟ ಚೆಕ್‌ ಪೋಸ್ಟ್‌ ಬಳಿ ಪಿರ್ಯಾದುದಾರರಾದ ಶಿವಕುಮಾರ್‌ ಇವರಸಂಬಂದಿ ರವಿಕುಮಾರ ಈತನು ಕರಿಯನಹಳ್ಳಿ ಗ್ರಾಮದ  ವಾಸಿ ಕೆ.ಸಿ. ನೀಲಕಂಠಪ್ಪ ಇವರೊಂದಿಗೆ  ಹಿರೋ ಹೋಂಡಾ ಬೈಕ್ ನಂ ಕೆಎ-18- ಹೆಚ್ 5612 ರಲ್ಲಿ  ಇಬ್ಬರು ಕುಳಿತು ನೀಲಕಂಠಪ್ಪ ಚಾಲನೆ ಮಾಡಿಕೊಂಡು ಮತಿಘಟ್ಟಕ್ಕೆ ಬಂದು ಮತಿಘಟ್ಟ ಗ್ರಾಮಪಂಚಾಯಿತಿ ಎದುರು ಹಾದು ಹೋಗಿರುವ  ಎನ್. ಹೆಚ್. 206 ರಸ್ತೆಯಲ್ಲಿ ಬೈಕ್ ನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊಂಡಿದ್ದಾಗ ಭಾಣಾವಾರ ಕಡೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಂ ಕೆಎ.06 ಎಫ್. 939 ರ ಚಾಲಕ ಕಡೂರು ಕಡೆಗೆ ಹೋಗಲೆಂದು ಬಸ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನೀಲಕಂಠಪ್ಪ ಮತ್ತು ರವಿಕುಮಾರ್ ರವರ ಹಿಂದೆ ಇದ್ದ ಪೊಲೀಸ್ ಬ್ಯಾರೆಕೇಡ್ ಗೆ ಮೊದಲಿಗೆ ಡಿಕ್ಕಿ ಹೊಡೆಸಿ ಬ್ಯಾರೆಕೇಟ್ ಸಮೇತ ಬಸ್ ಮುಂದಕ್ಕೆ ಚಲಿಸಿ ಬೈಕ್ ನಿಲ್ಲಿಸಿಕೊಂಡಿದ್ದ ನೀಲಕಂಠಪ್ಪ ಮತ್ತು ರವಿಕುಮಾರ್ ನಿಗೆ ಡಿಕ್ಕಿ ಹೋಡೆಸಿದಾಗ ಬೈಕ್ ಸಮೇತ ಕೆಳಕ್ಕೆ ಬಿದ್ದಾಗ  ಬಸ್ಸಿನ ಚಕ್ರ ಹರಿದು ರವಿಕುಮಾರ್ ನಿಗೆ ಮತ್ತು ನೀಲಕಂಠಪ್ಪನಿಗೆ ತೀವ್ರ ತರವಾದ ಪೆಟ್ಟಾಗಿ ತೀವ್ರ ರಕ್ತ ಸಾವ್ರವಾಗಿ ಸ್ಥಳದಲ್ಲಿ ಇಬ್ಬರು ಮೃತಪಟ್ಟಿರುತ್ತಾರೆ.

Thursday, April 25, 2013

Daily Crimes Report Dated:24/04/2013

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ
ನಗರ ಪೊಲೀಸ್ ಠಾಣೆ ಮೊ.ಸಂ- 107/2013 ಕಲಂ- 127(ಎ) 153(ಎ) ಐಪಿಸಿ – ದಿನಾಂಕ 15/04/2013 ರಂದು 1430 ಗಂಟೆಯಲ್ಲಿ ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಜಾತ್ಯತೀತ  ಜನತಾದಳದ ಅಭ್ಯರ್ಥಿ ಶ್ರೀ ಎಸ್.ಎಲ್ .ಧರ್ಮಗೌಡ ಹಾಗೂEvÀgÉDgÉÆævÀgÀÄಬಿ.ಜಿ,ಪಿ ಅಭ್ಯರ್ಥಿ ಶ್ರೀ ಸಿ.ಟಿ ರವಿ ಮತ್ತು ಪಕ್ಷದ ಮುಖಂಡರುಗಳ ಮೇಲೆ ಅಪಪ್ರಚಾರ ಮಾಡುವ ದೃಷ್ಟಿಯಲ್ಲಿ ಪ್ರಕಟಿಸಿದ ಕರಪತ್ರಗಳನ್ನು ಮತದಾರರಿಗೆ ಹಂಚಿ ಅವರನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ತಿಸಿದ್ದು ಇದು ಚುನಾವಣಾ ನೀತಿ  ಸಂಹಿತಿಯ ಉಲ್ಲಂಘನೆಯಾಗಿರುತ್ತೆ ಪ್ರಕರಣವನ್ನು ದಾಖಲಿಸಿ ಕ್ರಮ ವಹಿಸುವಂತೆ   ತಿಳಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
ಅಕ್ರಮ ಮದ್ಯ ವಶ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ- 101/2013 ಕಲಂ- 34 ಕೆ.ಇ.ಆಕ್ಟ್ – ದಿನಾಂಕ 24/04/2013 ರಂದು 1900 ಗಂಟೆಯಲ್ಲಿ ಪಿಎಸ್‌‌ಐ ರವರು ಆಣೂರು ಗ್ರಾಮದ ವಸಂತರಾಜ್‌ ರವರ ಅಂಗಡಿಯಲ್ಲಿ 180  ಎಂ ಎಲ್‌ ನ  30  OUR CHOICE Special WHISKY, ಎಂದು ಬರೆದಿರುವ ಬ್ರಾಂಡಿ  ಕ್ವಾಟರ್‌ಗಳು ಇದ್ದು ಅವುಗಳ  ಬಗ್ಗೆ ಪರವಾನಗೆ ಕೇಳಲಾಗಿ ಯಾವುದು ಇರುವುದಿಲ್ಲ ಎಂದು ತಿಳಿಸಿದ ಮೇರೆಗೆ ಅಂಗಡಿ ಮಾಲೀಕನಿಂದ ಬ್ರಾಂದಿ ಪ್ಯಾಕೆಟ್‌ಗಳನ್ನು ಮತ್ತು ಆರೋಪಿತನನ್ನು ವಶಕ್ಕೆ ಪಡೆದು ಕೊಂಡು ಅದರಲ್ಲಿ  180ಎಂ ಎಲ್ ನ ಒಂದು ಕ್ವಾಟರ್‌ಅನ್ನು ಪರೀಕ್ಷೆಗಾಗಿ ಪಂಚರ ಸಮಕ್ಷಮ ತೆಗೆದಿರಿಸಿರುತ್ತೆ, ಅಮಾನತ್‌ ಪಡಿಸಕೊಂಡು ಮಾಲಿನ ಬೆಲೆ – ಸುಮಾರು 1140 -00  ರೂ ಆಗಿರುತ್ತೆ, 

Wednesday, April 24, 2013

Daily Crimrs Report Dated 23/04/2013

ಕಳುವು ಪ್ರಕರಣ
ಕೊಪ್ಪ ಪೊಲೀಸ್ ಠಾಣೆ ಮೊ.ಸಂ- 74/2013 ಕಲಂ- 457 380 ಐಪಿಸಿ – ದಿನಾಂಕ 20/04/2013 ರಂದು ಪಿರ್ಯಾದಿ ಶಿವಶಂಕರ ಇವರು ಮನೆಗೆ ಬೀಗ ಹಾಕಿಕೊಂಡು ಅವರ ಊರಾದ  ಗುಡ್ಡೇಹಳ್ಳಕ್ಕೆ ಹೋಗಿದ್ದು, ಮನೆಗೆ ಬಂದು ನೋಡಿದಾಗ  ಮನೆಯ ಮುಂದಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ರಾತ್ರಿ ವೇಳೆ ಯಾರೋ ಕಳ್ಳರು ಒಡೆದು ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿದ್ದ 17000 ರೂ.ನಗದು ಸೇರಿದಂತೆ 7 ಗ್ರಾಂ ತೂಕದ ಮಗುವಿನ ಚಿನ್ನದ ಸರ ಮತ್ತು 2 ಗ್ರಾಂ ತೂಕದ ಚಿನ್ನದ ಬೆರಳಿನ ಉಂಗುರ  12 ಗ್ರಾಂ ತೂಕದ ಚಿನ್ನದ ಕಿವಿಯೋಲೆ ಮತ್ತು ಬುಗುಡಿ ಹಾಗು 50 ಗ್ರಾಂ ತೂಕದ ಬೆಳ್ಳಿಯ ಕಾಲು ಕಡಗ ಮತ್ತು ಚೈನ್ ಇವುಗಳನ್ನು  ಕಳವು ಮಾಡಿಕೊಂಡು ಹೋಗಿದ್ದು ಇವುಗಳ ಒಟ್ಟು ಅಂದಾಜು ಬೆಲೆ 75000 ರೂ. ಗಳಾಗಬಹುದು.
ಅಕ್ರಮ ಮದ್ಯ ವಶ
ಲಿಂಗದಹಳ್ಳಿ ಪೊಲೀಸ್ ಠಾಣೆ ಮೊ.ಸಂ- 29/2013 ಕಲಂ- 34 ಕೆ.ಇ.ಆಕ್ಟ್‌ – ಉಡೇವಾ ಗ್ರಾಮದ ಸಾರ್ವಜನಿಕ  ರಸ್ತೆಯಲ್ಲಿ  ಒಂದು ಪ್ಲಾಸ್ಟೀಕ್ ಬ್ಯಾಗಿನಲ್ಲಿ ಮದ್ಯದ ಪೌಚ್ ಗಳನ್ನು ಇಟ್ಟುಕೊಂಡು  ಮಾರಾಟ ಮಾಡುತ್ತಿರುವುದು  ಕಂಡು ಬಂದಿತು.ಪಿಎಸ್‌‌ಐ ರವರು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಪ್ಲಾಸ್ಟೀಕ್ ಬ್ಯಾಗಿನಲ್ಲಿದ್ದ ಮದ್ಯದ ಪೌಚ್‌ಗಳನ್ನು  ಇಟ್ಟುಕೊಳ್ಳಲು ಹಾಗೂ ಮಾರಾಟ ಮಾಡಲು  ಪರವಾನಿಗೆ ಇದೆಯೇ ಎಂದು ಪ್ರಶ್ನೀಸಿದಾಗ  ತನ್ನಲ್ಲಿ ಇಲ್ಲವೆಂದು ತಿಳಿಸಿದನು ಬ್ಯಾಗಿನಲ್ಲಿದ್ದ  ಮದ್ಯದ ಪೌಚ್ ಗಳನ್ನು  ಕೆಳಗೆ ಸುರಿದು ಎಣಿಸಿ ನೋಡಲಾಗಿ  180 ML    ಒಟ್ಟು  24  OLD TAVERN WHISKY  ಪೌಚ್‌ಗಳು ಇದ್ದು ಇವುಗಳ ಅಂದಾಜು ಬೆಲೆ 1200/ರೂ  ಆಗಿದ್ದು ಇತ್ಯಾದಿ ಆರೋಪಿ ಜಗದೀಶ್‌‌ ಎಂಬುವರನ್ನು ದಸ್ತಗಿರಿ ಮಾಡಿರುವುದಾಗಿರುತ್ತೆ.
ಚುನಾವಣೆ ನೀತಿ ಸಂಹಿತಿ ಉಲ್ಲಂಘನೆ
ಕಡೂರು ಪೊಲೀಸ್ ಠಾಣೆ ಮೊ.ಸಂ- 135/2013 ಕಲಂ- 188 ಐಪಿಸಿ – ಡಿ ಕಾರೆಹಳ್ಳಿ ಗ್ರಾಮ ದಲ್ಲಿ ಶ್ರೀ ಕಾಳಿಕಾಂಭ ದೇವಸ್ಥಾನ ಮುಂಭಾಗ ಮತ್ತು ಟಾರು ಒಳಗಿನ ರಸ್ತೆಗೆ ಹೊಸದಾಗಿ ಜೆಲ್ಲಿ ಕಲ್ಲು ಹಾಕಿ ರಸ್ತೆ ಕಾಮಗಾರಿ ಮಾಡುತ್ತಿದ್ದರೆಂದು ಮಾಹಿತಿ ಬಂದಿದ್ದು ಶೇಷೆಗೌಡ ಚುನಾವಣೆ ನೀತಿ ಸಂಹಿತೆ ಅಧಿಕಾರಿಅಲ್ಲಗೆ ಹೋಗಿ ನೋಡಲಾಗಿ ನೀತಿ ಸಂಹಿತೆ ಜಾರಿ ಇದ್ದರು ಅನಧಿಕೃತವಾಗಿ ರಸ್ತೆ ಕಾಮಗಾರಿ ಮಾಡುತ್ತಿದ್ದುದು ಕಂಡು ಬಂದಿದ್ದು ಊರ ಒಳಗೆ ಹೋಗುವ ರಸ್ತೆಗೆ ಜೆಲ್ಲಿ ಕಲ್ಲು ಹಾಕಿದ್ದು ಸ್ವಲ್ಪ ದೂರದಲ್ಲಿ ನೀಲಿ ಬಣ್ಣದ ನೀರಿನ ಟ್ಯಾಂಕರ್ ಇದ್ದು ದೇವಸ್ಥಾನದ ಬಲಬಾಗದ ಮುಂಭಾಗ ಜಲ್ಲಿ ಪುಡು ರಾಶಿ ಹಾಕಿರುವುದು ಮತ್ತು 4ಕಡೆಗಳಲ್ಲಿ ಅಲ್ಲಲ್ಲಿ ಜಲ್ಲಿ ಕಲ್ಲು ರಾಶಿ ಹಾಕಿರುವುದು  ಕಂಡು ಬಂದಿರುತ್ತೆ ಈ ಜಲ್ಲಿ  ಕಲ್ಲನ್ನು  ಟ್ಯ್ರಾಕ್ತರ್ ನಂ-ಕೆಎ-13-ಟಿಪಿ-3098 /3099 ರಲ್ಲಿ ತಂದು ಹಾಕಿದ್ದು ಟ್ರೇಲರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದು ಇಂಜಿನ್ ನನ್ನು ಚಂದ್ರಪ್ಪರವರ ಮನೆಯ ಮುಂದೆ ನಿಲ್ಲಿಸಿದ್ದು ಈ ಕಾಮಗಾರಿಯನ್ನು ಮದು ಬಿನ್ ಸಿ.ಆರ್.ನಂಜುಂಡಪ್ಪ ರವರು ಮಾಡಿಸುತ್ತಿರುವುದಾಗಿ ತಿಳಿದು ಬಂದಿರುತ್ತೆ ಹಾಲಿ ವಿದಾನ ಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ರಸ್ತೆ ಕಾಮಗಾರಿ ಮಾಡುತ್ತಿದ್ದ ಮದು ಬಿನ್ ಸಿ.ಆರ್.ನಂಜುಂಡಪ್ಪ ರವರ ಮೇಲೆ ಕಾನೂನು ಕ್ರಮ ಕೋರಿ ದೂರು ನೀಡಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.
ಚುನಾವಣೆ ನೀತಿ ಸಂಹಿತಿ ಉಲ್ಲಂಘನೆ
ಕಡೂರು ಪೊಲೀಸ್ ಠಾಣೆ ಮೊ.ಸಂ- 136/2013 ಕಲಂ- 177(ಇ)188 ಐಪಿಸಿ – ಗುಂಡುಸಾಗರ ಗ್ರಾಮಕ್ಕೆ  ಜಾತ್ಯಾತೀತ ಜನತಾ ದಳದ 5-6 ಮಹಿಳಾ ಕಾರ್ಯಕರ್ತರನ್ನು  ಓಮಿನಿ ಕಾರ್  ನಂಬರ್ ಕೆ ಎ 18 ಎನ್ 8651 ರ ಚಾಲಕ ರವಿಚಂದ್ರನಾಯ್ಕ ಈತನು ಕರೆದುಕೊಂಡು ಬಂದು ವಿದಾನ ಸಭಾ ಬಿ,ಜೆ,ಪಿ ಅಭ್ಯರ್ಥಿ ಸಿ,ಟಿ ರವಿ ರವರ ಕುರಿತು ಇರುವ ಕರಪತ್ರಗಳನ್ನು ಯಾವುದೇ ಪರವಾನಗಿ ಇಲ್ಲದೆ ಕಾರಿನಲ್ಲಿ ಇಟ್ಟುಕೊಂಡಿರುವುದು ಮತ್ತು ಕಾರನ್ನು ಯಾವುದೇ ಪರವಾನಗಿ ಇಲ್ಲದೆ ಚುನಾವಣಾ ಪ್ರಚಾರಕ್ಕೆ ಬಳಸಿರುವುದು ಕಂಡು ಬಂದಿದ್ದು ಮತ್ತು ಚಾಲಕ ರವಿಚಂದ್ರನಾಯ್ಕನಿಗೆ ಮಹಿಳಾ ಕಾರ್ಯ ಕರ್ತರ ಹೆಸರು ಮತ್ತು ವಿಳಾಸ ತಿಳಿಯದಿರುತ್ತೆ,ಹಾಲಿ ವಿದಾನ ಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿ ಮೇಲ್ಕಂಡ ಕಾರಿನಲ್ಲಿ ಅನಧಿಕೃತವಾಗಿ ಕರಪತ್ರಗಳನ್ನು ಇಟ್ಟುಕೊಂಡಿದ್ದರ ಮೇರೆಗೆ ಚಾಲಕ ರವಿಚಂದ್ರನಾಯ್ಕ ರವರ ಮೇಲೆ ಕಾನೂನು ಕ್ರಮ ಕೋರಿ ದೂರು ನೀಡಿದ್ದರ ಮೇರೆಗೆ  ಪ್ರಕರಣ ದಾಖಲಿಸಿಕೊಂಡಿರುತ್ತೆ.
ಅಕ್ರಮ ಮದ್ಯ ವಶ
ಸಿಂಗಟಗೆರೆ ಪೊಲೀಸ್ ಠಾಣೆ ಮೊ.ಸಂ- 34/2013 ಕಲಂ- 34  ಕೆ.ಇ.ಆಕ್ಟ್‌ – ದಿನಾಂಕ 22/04/2013 ರಂದು ಮಲ್ಲಘಟ್ಟ ತಾಂಡ್ಯದಲ್ಲಿ ಶ್ರೀಮತಿ ಭೀಮಾಬಾಯಿ ಎಂಬಮಹಿಳೆಯು ಒಂದು ಬಿಳಿ ಬಣ್ಣದ ಪ್ಲಾಸ್ಟೀಕ್ ಚೀಲವನ್ನು ತಲೆಯ ಮೇಲೆ ಹೊತ್ತು  ಕೊಂಡು ಹೋಗುತ್ತಿದ್ದವಳು ಜೀಪನ್ನು ಕಂಡು ಓಡಲು ಪ್ರಯತ್ನಿಸಿದವಳನ್ನು ಸಿಬ್ಬಂದಿಗಳು ಹಾಗೂ ಪಂಚರ ಸಹಾಯದಿಂದ ಸದರಿ ಮಹಿಳೆಯನ್ನು ಸುತ್ತುವರಿದು ಹಿಡಿದು ಆಕೆಯ ಬಳಿ ಇದ್ದ ಚೀಲವನ್ನು ಪರೀಶಿಲಿಸಲಾಗಿ,ಸದರಿ ಚೀಲದಲ್ಲಿ ರಾಜ ವಿಸ್ಕೀಯ ಪ್ಲಾಸ್ಟೀಕ್ ಪ್ಯಾಕೇಟ್‌ಗಳಿದ್ದು ಅವುಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೊಗುತ್ತಿರುವುದಾಗಿ ತಿಳಿದು ಬಂದಿದ್ದರಿಂದ, ಆಕೆಯ ಬಳಿ ಪರವಾನಗಿ ಕೇಳಲಾಗಿ ಆಕೆಯು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ನುಡಿದ ಮೇರೆಗೆ ಆಕೆಯ ಬಳಿ ಇದ್ದ ಚೀಲವನ್ನು ಪರಿಶೀಲಿಸಲಾಗಿ ಬಿಳಿ ಬಣ್ಣದ ಪ್ಲಾಸ್ಟೀಕ್ ಚೀಲವಾಗಿದ್ದು , ಸದರಿ  ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್. ನ 156 ರಾಜಾವಿಸ್ಕಿ ಪ್ಯಾಕೇಟ್‌ಗಳು ಇದ್ದು,  ಪ್ಯಾಕೇಟ್‌ಗಳ ಮೇಲೆ 22.16/- ರೂ ಬೆಲೆ ಇದ್ದು, ಇವುಗಳ  ಒಟ್ಟು ಬೆಲೆ ಅಂದಾಜು 3456.96/- ರೂಗಳು ಆಗಿರುತ್ತದೆ.