Thursday, January 31, 2013

Daily Crimes Report Dated:30/01/2013

ಕಳುವು ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 38/2013 ಕಲಂ 457 380  ಐಪಿಸಿ – ದಿನಾಂಕ 29/01/2013 ರಂದು 2245 ಗಂಟೆಯಲ್ಲಿ ಪಿರ್ಯಾದುದಾರರಾದ ಮಹೇಂದ್ರ ಕೆ.ಬಿ,ಹಾಳ್‌ ವಾಸಿ ಇವರು ಶ್ರೀ ದುರ್ಗಾಂಭ ಬಾರ್ ಗೆ ಬಾಗಿಲು ಹಾಕಿಕೊಂಡು ಹೋಗಿದ್ದು ಬೆಳಿಗ್ಗೆ ಬಾರ್‌ಗೆ ಬಂದು ಒಳಗೆ ಹೋಗಿ ನೋಡಲಾಗಿ ಡ್ರಾನಲ್ಲಿದ್ದ 65,000/- ರೂ ಹಣವನ್ನು ಯಾರೋ ಕಳ್ಳರು ರಾತ್ರಿ ಸಮಯದಲ್ಲಿ  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಪತ್ತೆಮಾಡಿಕೊಡಬೇಕಾಗಿ ಕೋರಿಕೆ.
 ಕಳುವು ಪ್ರಕರಣ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ- 15/2013 ಕಲಂ 457 380  ಐಪಿಸಿ – ದಿನಾಂಕ 29/01/2013 ರಂದು ರಾತ್ರಿ ವೇಳೆಯಲ್ಲಿ ಗುಲ್ಲನ್‌ಪೇಟೆಯ ಬಿ.ಎಸ್.ಎನ್.ಎಲ್.ದೂರವಾಣಿ ಕಛೇರಿಯ ಗೇಟಿನ ಬೀಗವನ್ನು ಯಾರೋ ಕಳ್ಳರು ನಕಲಿ ಕೀ ಬಳಸಿ ತೆಗೆದು ಒಳಗೆ ಪ್ರವೇಶ ಮಾಡಿ ಗೋಡನಲ್ಲಿಟ್ಟಿದ್ದ 1] 200 ಎ.ಹೆಚ್. 48 ಅಮಾರಾಜ್ ಕಂಪೆನೆಯ ಬ್ಯಾಟರಿಯ ಶೆಲ್ ಗಳು. 2] 150 ಮೀಟರ್ ಸ್ವೀಚ್ ಕೇಬಲ್ ವೈರ್. 3] 10 ಮೀಟರ್ 200 ಪೇರ್ 4/4 ಕೇಬಲ್. ಮತ್ತು ಜನರೇಟರ್ ರೂಂನಲ್ಲಿಟ್ಟಿದ್ದ 4] 03 ಬೆಂಕಿ ನಂದಿಸುವ ಸೀಲಿಂಡರ್ ಗಳು. ಸ್ವೀಚ್ ರೂಂನಲ್ಲಿಟ್ಟಿದ್ದ 5] ಎ.ಹೆಚ್. 15 ಎಕ್ಸಿಡ್.ಶೆಲ್ ಗಳು. ಈ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅವುಗಳ ಅಂದಾಜು ಬೆಲೆ 52.000.00 ರೂಗಳಾಗಿರುತ್ತೆ.ಪತ್ತೆಮಾಡಿಕೊಡಬೇಕೆಂದು ಪರಪ್ಪ ಬಿಎಸ್‌‌ಎನ್‌ಎಲ್‌ ಎಸ್‌ಡಿಓಟಿ ಇವರು ದೂರು ನೀಡಿರುವುದಾಗಿರುತ್ತೆ.
ಮನುಷ್ಯ ಕಾಣೆ
ಕಳಸ ಪೊಲೀಸ್ ಠಾಣೆ ಮೊ.ಸಂ- 03/2013 ಕಲಂ  ಮನುಷ್ಯ ಕಾಣೆ ದಿನಾಂಕ 24/01/2013 ರಂದು ಬಾಬು ಎಂ.ಬಿನ್‌ ತೋಮಯ್ಯ 65ವರ್ಷ ಗಂಗನಕೊಡಿಗೆ ವಾಸಿ ಇವರು ಕಳಸ ಪಟ್ಟಣಕ್ಕೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೋದವರು ಇದುವರೆವಿಗೂ ಮನೆಗೆ ವಾಪಾಸು ಬಂದಿರುವುದಿಲ್ಲ. ನಾವುಗಳು ನೆಂಟರಮನೆ, ಸ್ನೇಹಿತರ ಮನೆ ಊರಿನಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಎಲ್ಲಿ ಇರುತ್ತಾರೆಂದು ತಿಳಿದುಬಂದಿರುವುದಿಲ್ಲ. ಪತ್ತೆಮಾಡಿಕೊಡಬೇಕೆಂದು ರಾಮಚಂದ್ರ ಇವರು ದೂರು ನೀಡಿರುವುದಾಗಿರುತ್ತೆ.
 ಕಳುವು ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 20/2013 ಕಲಂ 328 380  ಐಪಿಸಿ ಸಂದೀಪ ಬಿನ್ ರಾಮಪ್ಪ ಈತನು ಪಿರ್ಯಾದಿ ಲಲಿತಮ್ಮ ಗಾಳಿಹಳ್ಳಿ ಕ್ರಾಸ್‌ ತರೀಕೆರೆಟೌನ್‌ ವಾಸಿ ಇವರ ಮನೆಗೆ ಬಂದಿದ್ದು ಅಲ್ಲೇ ಇದ್ದ ಒಂದು ಲೋಟಕ್ಕೆ ಜ್ಯೂಸ್ ಹಾಕಿ ಪಿರ್ಯಾದಿಗೆ ಕಾಣದಂತೆ ಮತ್ತು ಬರುವ ವಸ್ತುವನ್ನು ಜ್ಯೂಸ್‌ನಲ್ಲಿ ಹಾಕಿ ಪಿರ್ಯಾದುದಾರರಿಗೆ ನೀಡಿದ್ದು ಅದನ್ನು ಕುಡಿದ ಪಿರ್ಯಾದುದಾರರು ಜ್ಞಾನತಪ್ಪಿ ಮಲಗಿದ್ದು ಅವರ ಕೊರಳಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಎರಡು ಬಂಗಾರದ ತಾಳಿ ಮತ್ತು ಬಂಗಾರದ ಕಾಸು ಇರುವ ಮಾಂಗಲ್ಯಸರವನ್ನು ಮತ್ತು ಮನೆಯಲ್ಲಿಯೇ ಟೇಬಲ್‌‌ ಮೇಲೆ ಇಟ್ಟಿದ್ದ ಎರಡು ಮೊಬೈಲ್‌ ಮತ್ತು ದೇವರ ಮನೆಯಲ್ಲಿಟ್ಟಿದ್ದ 8000/-ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಇವುಗಳ ಒಟ್ಟು ಮೌಲ್ಯ ಸುಮಾರು 95000/-ರೂ ಆಗಿರುತ್ತೆ. 

Wednesday, January 30, 2013

Daily Crimes Report Dated:29/01/2013

ಅಪಘಾತದಲ್ಲಿ ಸಾವು
ಸಂಚಾರ ಪೊಲೀಸ್ ಠಾಣೆ ಮೊ.ಸಂ- 13/2013 ಕಲಂ 279 304(ಎ) ಐಪಿಸಿ ದಿನಾಂಕ 29/01/2013 ರಂದು 2030 ಗಂಟೆಯಲ್ಲಿ ಅಲ್ಲಂಪುರದ ಬಳಿ ಪಿರ್ಯಾದಿ ವೆಂಕಟೇಶ ಇವರ  ತಂದೆ ಕೃಷ್ಣಶೆಟ್ಟಿ ಬಿನ್ ಸತ್ಯಪ್ಪಶೆಟ್ಟಿ, 50 ವರ್ಷ, ಇವರು ಜಮೀನು ಹತ್ತಿರ ಹೋಗಲು ರಸ್ತೆಯಲ್ಲಿ ಸೈಕಲ್ ನಲ್ಲಿ ಬರುತ್ತಿರುವಾಗ, ಚಿಕ್ಕಮಗಳೂರು ನಗರದ ಕಡೆಯಿಂದ ಕೆಎ-03-ಹೆಚ್.ಜೆ.-0893 ರ ಮೋಟರ್ ಸೈಕಲ್ ಚಾಲಕ ಶರತ್ ಅತೀವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ,ಕೃಷ್ಣಶೆಟ್ಟಿ ರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮೈ ಕೈಗೆ ಮತ್ತು ತಲೆಗೆ ಪೆಟ್ಟಾಗಿ ರಕ್ತಗಾಯವಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.
ಜೂಜಾಟ ಪ್ರಕರಣ
ಕೊಪ್ಪ ಪೊಲೀಸ್ ಠಾಣೆ ಮೊ.ಸಂ- 13/2013 ಕಲಂ 87 ಕೆ.ಪಿ.ಆಕ್ಟ್‌ ದಿನಾಂಕ 29/01/2013 ರಂದು 1800 ಗಂಟೆಯಲ್ಲಿ ನಂದಿನಿ ವೈನ್‌ ಶಾಪ್‌ ಬಳಿ ಜೂಜಾಟ ಆಡುತ್ತಿರುವ ಬಗ್ಗೆಉಪ ನಿರೀಕ್ಷಕರವರಿಗೆ ದೊರೆತ ಖಚಿತ ವರ್ತಮಾನದಂತೆ ಧಾಳಿ ಮಾಡಿ ಆರೋಪಿತರುಗಳಾದ  ರವಿ ಬಿನ್  ಹುಚ್ಚೇಗೌಡ, ಆಸಿಫ್ ಬಿನ್ ಅಬ್ದುಲ್ ರೆಹಮಾನ್, ಗಜೇಂದ್ರ ಬಿನ್ ಕೃಷ್ಣ, ವೆಂಕಟೇಶ ಬಿನ್ ಮಡಿವಾಳಪ್ಪರವರನ್ನು ವಶಕ್ಕೆ ಪಡೆದು ಅವರುಗಳು ಇಸ್ಪೀಟ್ ಜೂಜಾಟಕ್ಕೆ  ಉಪಯೋಗಿಸಿದ  52 ಇಸ್ಪೀಟ್ ಎಲೆಗಳನ್ನು ಹಾಗು  ಪಣವಾಗಿಟ್ಟಿದ್ದ ಒಟ್ಟು ಹಣ ರೂ. 320 ಗಳನ್ನು ವಶಕ್ಕೆ ಪಡೆದು ಸ್ವ ಪಿರ್ಯಾದು ಪ್ರಕರಣ ದಾಖಲಿಸಿರುತ್ತದೆ. 
ಅಪಹರಣ ಪ್ರಕರಣ
ಬಾಳೆಹೊನ್ನುರು ಪೊಲೀಸ್ ಠಾಣೆ ಮೊ.ಸಂ- 13/2013 ಕಲಂ 366(ಎ) ಐಪಿಸಿ– ದಿನಾಂಕ 26/01/2013 ರಂದು ಕೊಳಲೆ ಗ್ರಾಮದಿಂದ ಪಿರ್ಯಾದಿ ಚಂದ್ರು ಇವರ ಮಗಳು ಬಾಳೆಹೊನ್ನೂರುಗೆ ಹೋಗಿ ಬರುವುದಾಗಿ  ಸೋಮಮ್ಮ ರವರಲ್ಲಿ ಹೇಳಿ ಹೋಗಿದ್ದು,  ಸಂಜೆ ಯಾದರೂ ಮನೆಗೆ ಬಾರದೆ ಇದ್ದರಿಂದ  ಪಿರ್ಯಾದಿಯು ಎಲ್ಲಾ ಕಡೆ   ನೆಂಟರಿಷ್ಟರ ಮನೆಗಳಲ್ಲಿ  ಎಲ್ಲಾ ಕಡೆ ವಿಚಾರ ಮಾಡಿ  ಆರೋಪಿ  ಕೆ.ಆರ್  ಪ್ರವೀಣ  ಬಿನ್ ರಾಮಯ್ಯ  ಕೊಳಲೆ ಗ್ರಾಮ ಈತನು  ಪಿರ್ಯಾದಿಯ  ಮಗಳಾದ ಸುಮಾರು  16 ವರ್ಷ ಪ್ರಾಯದ  ಅಪ್ರಾಪ್ತ ವಯಸ್ಸಿನ  ಮಗಳನ್ನು    ಪುಸಲಾಯಿಸಿ   ಅಪಹರಿಸಿಕೊಂಡು ಕೊಂಡು  ಹೋಗಿರುತ್ತಾನೆಂದು  ಆರೋಪಿ   ಕೆ ಆರ್ ಪ್ರವೀಣ ಈತನ  ಮೇಲೆ ಕಾನೂನು ಕ್ರಮ ಕೋರಿ ಕೊಟ್ಟ ದೂರು ಆಗಿರುತ್ತದೆ,
ಮದುವೆಯಾಗುವುದಾಗಿ ನಂಬಿಸಿ ದ್ರೋಹ
ಮಲ್ಲಂದೂರು ಪೊಲೀಸ್ ಠಾಣೆ ಮೊ.ಸಂ- 06/2013 ಕಲಂ 417 114 ಐಪಿಸಿ¦AiÀiÁðzÀÄzÁgÀರಾದ 19 ವರ್ಷದ ಹುಡುಗಿ ವಾಸ ಸುಗುಡವಾಣಿ ಗ್ರಾಮ ಇವರಿಗೆ ªÀÄzÀÄªÉ AiÀiÁUÀĪÀÅzÁV £ÀA©¹, ¦AiÀiÁðzÀÄzÁgÀgÀ£ÀÄß zÉÊ»PÀªÁV ¸ÀªÁð£ÀĸÁgÀªÁV G¥ÀAiÉÆÃV¹ PÉÆArzÀÄÝ,¦AiÀiÁðzÀÄzÁgÀgÀÄ UÀ©üðtÂAiÀiÁVzÀÄÝ, F §UÉΠ ¥ÀAZÁ¬Äw ªÀiÁrzÀÄÝ, ¥ÀAZÁ¬Äw ¸ÀªÀÄAiÀÄzÀ°è DgÉÆæ ಬಾಸ್ಕರ UÀ©üðtÂAiÀiÁUÀ®Ä £Á£Éà PÁgÀt PÀvÀð£ÁVgÀÄvÉÛ£ÉAzÀÄ M¦à zsÀªÀÄð¸ÀܼÀPÉÌ ºÉÆÃV §AzÀÄ ªÀÄzÀĪÉAiÀiÁUÀĪÀÅzÁV  J®ègÀ ªÀÄÄAzÉ M¦àPÉÆArzÀÄÝ, £ÀAvÀgÀzÀ ¢£ÀUÀ¼À°è vÀ¯ÉªÀÄgɹPÉÆArgÀĪÀ ¨sÁ¸ÀÌgÀ vÀ¯ÉªÀÄgɹPÉƼÀî®Ä PÁgÀt PÀvÀðgÁVgÀĪÀ ¸ÀÄzÁPÀgÀ, £ÁgÁAiÀÄt, ¨Á§Ä gÀªÀgÀÄUÀ¼À ªÉÄïɠ PÀæªÀÄ PÉÊUÉƼÀî®Ä ¤ÃrzÀ zÀÆgÀ£ÀÄß ¹éÃPÀj¹PÉÆAqÀÄ PÀæªÀÄ PÉÊUÉÆArgÀÄvÉÛ.

Tuesday, January 29, 2013

Daily Crimes Report Dated:28/01/2013

ಅಪಘಾತದಲ್ಲಿ ಸಾವು
ಹರಿಹರಪುರ ಪೊಲೀಸ್ ಠಾಣೆ ಮೊ.ಸಂ- 03/2013 ಕಲಂ 279 304(ಎ) ಐಪಿಸಿ ಪಿರ್ಯಾದುದಾರರಾದ ರಾಜೇಶ ನಿದಿಗೆ ಗ್ರಾಮದ ವಾಸಿ ಇವರ ತಂದೆ ರಾಮಚಂದ್ರ ರವರು  ದಿನಾಂಕ:11/01/2013 ರಂದು ಶೃಂಗೇರಿ ಕಡೆಗೆ ಇಂಡಿನ್ ಗ್ಯಾಸ್ ಕಂಪನಿಯ ಕೆ ಎ 14 ಎ 5380 ಲಾರಿಯನ್ನು ಎನ್.ಹೆಚ್.ಪಿ ಚಲಿಸಿಕೊಂಡು ಬಂದು ಎನ್.ಹೆಚ್.ಪಿ ತಿರುವಿನ ಇಳಿಜಾರಿನಲ್ಲಿ ಲಾರಿ ನಿಲ್ಲಿಸಿ ಕೆಳಗೆ ಇಳಿದಿದ್ದು,ಲಾರಿ ಏಕಾಏಕಿ ಚಲಿಸಿದ್ದನ್ನು ಕಂಡು ಲಾರಿಯನ್ನು ನಿಲ್ಲಿಸಲು ಲಾರಿ ಹತ್ತಲು ಹೋಗಿ ಲಾರಿಯಿಂದ ಕೆಳಗೆ ಬಿದ್ದು, ಲಾರಿಯಿಂದ ಕೆಳಗೆ ಬಿದ್ದು,  ಬೆನ್ನಿಗೆ, ಬಲಗಾಲಿಗೆ ಪೆಟ್ಟಾಗಿದ್ದು, ಈ ಬಗ್ಗೆ ಚಿಕಿತ್ಸೆಗಾಗಿ ಕೊಪ್ಪ ಸರ್ಕಾರಿ ಆಸ್ಪತ್ರೆಗೆ   ನಂತರ ಶಿವಮೊಗ್ಗ ಆಸ್ಪತ್ರೆಗೆ ನಂತರ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ, ಮಣಿಪಾಲ ಆಸ್ಪತ್ರೆಗೆ,  ನಂತರ ಮಂಗಳೂರು ವೆನ್ ಲಾಕ್  ಆಸ್ಪತ್ರೆಗೆ  ಚಿಕಿತ್ಸೆಗೆ ಸೇರಿಸಿದ್ದು ಅಲ್ಲಿ ವೈದ್ಯರು ಎರಡೂ ಕಾಲುಗಳನ್ನು ತೆಗೆಯಬೇಕೆಂದು ಹೇಳಿದ್ದರಿಂದ ಊರಿನ ಹತ್ತಿರ ಆಸ್ಪತ್ರೆಗೆ ಸೇರಿಸೋಣ ಎಂದು ದಿನಾಂಕ:24/01/2013 ರಂದು ಪುನ:  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಂದು ಸೇರಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೇ  ಈ ದಿನ  ಅಂದರೆ 28/01/2013 ರಂದು ಬೆಳಿಗ್ಗೆ  07-15 ಗಂಟೆಗೆ  ಮೃತಪಟ್ಟಿರುತ್ತಾರೆ
ಕಳುವು ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ- 21/2013 ಕಲಂ 379 ಐಪಿಸಿ ಭದ್ರಾವತಿಯಲ್ಲಿ ವಾಸವಾಗಿರುವ ಪಿರ್ಯಾದಿ ಡಾ. ಮಹೇಶ್‌‌ ರವರು ಅವರ ತಾಯಿಯವರನ್ನು ಭೇಟಿ ಮಾಡಿ, ನಂತರ ಮಂಗಳೂರಿಗೆ ಹೋಗಲು,ದಿನಾಂಕ:28-01-2013 ರಂದು ಈಶಾನ್ಯ ಕೆ.ಎಸ್.ಆರ್.ಟಿ.ಸಿ.ಸಾರಿಗೆ ಸಂಸ್ಥೆಯ ಭದ್ರವಾತಿಯಿಂದ ಚಿಕ್ಕಮಗಳೂರಿಗೆ ಪ್ರಯಾಣಿಸಲು, ಟಿಕೇಟ್ ನಂ.044304 ನ್ನು ಖರೀದಿಸಿ, ಬಸ್ಸಿನಲ್ಲಿ ಪ್ರಯಾಣಿಸುತ್ತಿದಾಗ,ಅವರ ಬಳಿ ಇದ್ದ ಬಟ್ಟೆ,ದಾಖಲಾತಿಗಳು, ನಗದು ಹಣ 12.000/- ರೂ ಹಣವನ್ನು ಬಸ್ಸಿನ ಒಳಗಡೆ ಲಗೇಜ್ ಇಡುವ ಜಾಗದಲ್ಲಿ ಇಟ್ಟಿದ್ದು,ಚಿಕ್ಕಮಗಳೂರಿನ  ಬಸ್ ನಿಲ್ದಾಣಕ್ಕೆ ಸುಮಾರು 12-30 ಗಂಟೆಗೆ ಬಂದಿದ್ದು, ಆಗ ಬ್ಯಾಗ್ ನೋಡಿದಾಗ,ಸದರಿ ಜಾಗದಲ್ಲಿ ಬ್ಯಾಗ್ ಇರುವುದಿಲ್ಲ, ಬಸ್ಸಿನ ಒಳಗಡೆ ಹುಡುಕಿದರೂ ಸಿಕ್ಕಿರುವುದಿಲ್ಲ,ಯಾರೋ ಬ್ಯಾಗ್‌ನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದು, ಪಿರ್ಯಾದುದಾರರ ಬ್ಯಾಗ್‌ನ್ನು ಮತ್ತು ಅದರಲ್ಲಿದ್ದ ಈ ಕೆಳಕಂಡ ಮೂಲ ದಾಖಲಾತಿಗಳನ್ನು ಪತ್ತೆ ಮಾಡಿಕೊಡಲು ಕೊಟ್ಟ ದೂರಾಗಿರುತ್ತೆ.

Monday, January 28, 2013

Daily Crimes Report Dated:27/01/2013

ಮೋಟಾರ್‌ ಸೈಕಲ್‌ ಕಳುವು
ನಗರ ಪೊಲೀಸ್ ಠಾಣೆ ಮೊ.ಸಂ- 20/2013 ಕಲಂ 379 ಐಪಿಸಿ ದಿನಾಂಕ 16/01/2013 ರಂದು ಮಹಮದ್‌‌ಖಾನ್‌ ಗಲ್ಲಿಯಲ್ಲಿ ಪಿರ್ಯಾದುದಾರರಾದ ದರ್ಶನ್‌ ರವರು ತಮ್ಮ ಬಾಬ್ತು ಅಪಾಚಿ ಆರ್.ಟಿ.ಆರ್.180 ಸಿಸಿ.ಯ ಬಿಳಿ ಬಣ್ಣದ ಬೈಕ್ ನಂ.ಕೆಎ-18 ಯು-0909 ನ್ನು ನಮ್ಮ ವಾಸದ ಮನೆ ಮುಂದೆ ನಿಲ್ಲಿಸಿ ಸಮಯ 6-30 ಗಂಟೆಗೆ ಹೊರಕ್ಕೆ ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ,ಬೈಕ್ ನ ಎಂಜಿನ್ ನಂ.OE6HA2050247 ಮತ್ತು ಚಾರ್ಸಿ ನಂ.MD634KE60A2H27442 ಆಗಿದ್ದು ಸದರಿ ಬೈಕ್ ಅಂದಾಜು ಬೆಲೆ 40.000/- ರೂ ಆಗಿರುತ್ತೆ. ಪತ್ತೆಮಾಡಿಕೊಡಬೇಕಾಗಿ ಕೋರಿಕೆ.

Sunday, January 27, 2013

Daily Crimes Report Dated:26/01/2013

ಕಳುವು ಪ್ರಕರಣ
ನಗರ ಪೊಲೀಸ್ ಠಾಣೆ ಮೊ.ಸಂ- 19/2013 ಕಲಂ 457 380  ಐಪಿಸಿ – ದಿನಾಂಕ 25/01/2013 ರಂದು ರಾತ್ರಿ ವೇಳೆಯಲ್ಲಿ ಕಳ್ಳತನವಾಗಿದ್ದು,ಪಿರ್ಯಾದುದಾರರಾದ ಅಬ್ದುಲ್‌ರೆಹಮಾನ್‌ ಜಾಮೀಯ ಮಸೀದಿ ರಸ್ತೆಯಲ್ಲಿ ಇರವರುಪಿರ್ಯಾದುದಾರರು ಕೆಲಸ ಮಾಡುವ ಸಂಸ್ಥೆಯಲ್ಲಿ ಮೌಜಾನ್ ರವರು ದೂರವಾಣಿ ಕರೆ ಮಾಡಿ ಯಾರೋ ಕಳ್ಳರು ನಿಮ್ಮ ಕಛೇರಿಯ ಬೀಗ ಹೊಡೆದು ಕಳ್ಳತನ ಮಾಡಿದ್ದಾರೆಂದು ತಿಳಿಸಿದ ಕೂಡಲೇ ಕಛೇರಿಯ ಒಳಕ್ಕೆ ಹೋಗಿ ನೋಡಿದಾಗ ಅಲ್ಲಿದ್ದ  ಗಾಡ್ರೇಜ್ ಬೀರುಗಳನ್ನು ಹೊಡೆದು ಅಲ್ಲಿದ್ದ ದಾಖಲಾತಿಗಳನ್ನು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಆಡಳಿತಾಧಿಕಾರಿ ಊರಿನಲ್ಲಿ ಇಲ್ಲದ ಕಾರಣ ಈ ದಿನ ಬಂದು ಪರಿಶೀಲಿಸಲಾಗಿ ಸುಮಾರು 10.184 ರೂ ಹಣ ಕಳ್ಳತನವಾಗಿರುವುದು ಕಂಡುಬಂದ ಕಾರಣ ಪ್ರಕರಣ ದಾಖಲಿಸಿರುತ್ತೆ.
ಅತ್ಯಚಾರ ಪ್ರಕರಣ
ಬಾಳೆಹೊನ್ನುರು ಪೊಲೀಸ್ ಠಾಣೆ ಮೊ.ಸಂ- 11/2013 ಕಲಂ 342 417 420 376 354 506 34 ಐಪಿಸಿ – ಆರೋಪಿ ಪಳನಿಸ್ವಾಮಿ ಸಬ್‌‌ಪೋಸ್ಟ್ ಮಾಸ್ಟರ್‌‌ ಸಂಗಮೇಶ್ವರ ಪೇಟೆ ವಾಸಿ ಇವರು  ಪಿರ್ಯಾದುದಾರರಿಗೆ ಅಂಚೆ  ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ  15.000 ರೂ  ಹಣ ಪಡದು  ಕೆಲಸ ಕೊಡಿಸಿ  ಮದುವೆಯಾಗುವುದಾಗಿ  ನಂಬಿಸಿ   ಸಂಗಮೇಶ್ವರ ಪೇಟೆಯ ಅಂಚೆ  ಇಲಾಖೆಯ ವಸತಿ ಗೃಹದಲ್ಲಿ   ಅಕ್ರಮ ಬಂಧನದಲ್ಲಿರಿಸಿ ದೈಹಿಕ ಸಂಪರ್ಕ ನಡೆಸಿದ್ದು, ಆರೋಪಿ  02 ಕೊರಗಪ್ಪ ಅಂಚೆ ಅಧೀಕ್ಷಕರು ರವರು   ಸದರಿ     ವಸತಿ   ಗೃಹಕ್ಕೆ  ಬಂದಾಗ  ಪಿರ್ಯಾದುದಾರರನ್ನು  ಮೈ ಕೈ  ಮುಟ್ಟಲು ಪ್ರಯತ್ನಿಸಿದ್ದು, ಆರೋಪಿ    01 ಬೇಲೂರಿನ ದೇವಸ್ಥಾನದಲ್ಲಿ  ಬೇರೋಂದು  ಮದುವೆಯಾಗಿರುತ್ತಾರೆ.    ವಿಚಾರವಾಗಿ ದೂರು ನೀಡಿದರೆ   ಕೆಲಸದಿಂದ  ತೆಗೆಸುವುದಾಗಿ  ಕೊಲೆ ಮಾಡುವುದಾಗಿ  ಬೆದರಿಕೆ ಹಾಕಿರುತ್ತಾರೆ 
ಮನುಷ್ಯ ಕಾಣೆ
ಕಡೂರು ಪೊಲೀಸ್ ಠಾಣೆ ಮೊ.ಸಂ- 22/2013 ಕಲಂ ಮನುಷ್ಯ ಕಾಣೆ  ಬಿ. ಶ್ರೀನಿವಾಸ 41 ವರ್ಷ ಟಿಂಬರ್‌ ಕೆಲಸ ವಾಸ ಗವನಹಳ್ಳಿ  ಈತನು ದಿ:29-07-2011ರಂದು ಪಿರ್ಯಾದಿ ಶ್ರೀಲತಾ ರವರೊಂದಿಗೆ ಕಡೂರಿನ ಬಸ್ ನಿಲ್ದಾಣಕ್ಕೆ ಬಂದಿದ್ದು.ಪಿರ್ಯಾದಿಗೆ ರೈಲ್ವೇ ಸ್ಟೇಷನ್‌ನ ಹತ್ತಿಗೆ ಇರುವಂತೆ ಕಳುಹಿಸಿ ಬಸ್ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದು.ನಂತರ ರೈಲ್ವೇ ಸ್ಠಷನ್ ಗೆ ಹೋಗದೇ ಕಾಣೆಯಾಗಿರುತ್ತಾನೆಂದು ಇದುವರೆಗೆ ಆಂದ್ರಪ್ರಧೇಶದ,. ಗಿದ್ದಲೂರಿನಲ್ಲಿ ಮತ್ತು ಗವನಹಳ್ಳಿಯ ಸುತ್ತ-ಮುತ್ತ ಹುಡುಕಿದರೂ ಸಿಕ್ಕಿರುವುದಿಲ್ಲ.ಇದೇ ರೀತಿ ಈ ಹಿಂದೆಯು ಸಹ ನಮ್ಮನ್ನು ಬಿಟ್ಟುಹೋದವರು ನಂತರ ವಾಪಸ್ ಮನೆಗೆ ಬರಬಹುದೆಂದು ತಿಳಿದು.ಹುಡುಕುತಿದ್ದೆವು.ಆದರೆ ಇದುವರೆಗೆ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.   
ಅನಾಥ ಶವ ಪತ್ತೆ
ಬೀರೂರು ಪೊಲೀಸ್ ಠಾಣೆ ಯುಡಿಆರ್‌ ಸಂಖ್ಯೆ 04/2013 ಕಲಂ 174 ಸಿಆರ್‌ಪಿಸಿ – ಪಿರ್ಯಾದುದಾರರಾದ ಅರ್ಜುನ್‌ ಕಡೂರು ಟೌನ್‌ ವಾಸಿ ಇವರು ದಿನಾಂಕ 25/01/2013ರಂದು ಉಳಿನಾಗರು ಹತ್ತಿರ ಇರುವ ಅಡಿಕೆ ತೋಟಕ್ಕೆ ಹೋದಾಗ ಅಡಿಕೆ ಮರದ ಕೆಳಗೆ ಯಾರೋ ಒಬ್ಬ 35 ವರ್ಷ ವಯಸ್ಸಿನ ಗಂಡಸು ಮಲಗಿರುವುದು ಕಂಡುಬಂದು,ಹೋಗಿ ನೋಡಲಾಗಿ ಆತನು ಸತ್ತಿರುವುದು ಕಂಡು ಬಂದಿದ್ದು, ಆತನ ಹೆಸರು, ವಿಳಾಸ, ಪರಿಚಯ ಇರುವುದಿಲ್ಲಾ, ಆತನು ಊಟ-ತಿಂಡಿ ಸೇವನೆ ಮಾಡದೆ ನಿದ್ರಣಗೊಂಡು ಸತ್ತಂತೆ ಕಂಡು ಬಂದಿರುತ್ತೀದೆ,  ಮಹಜರ್‌ ಕ್ರಮ ಜರುಗಿಸುವಂತೆ ಕೋರಿಕೊಂಡಿರುತ್ತಾರೆ.